ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವೀನ್ ಅನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಲಾಯಿತು.
ಶಾಲಾ ಶಿಕ್ಷಕರಿಂದಲೇ ಕ್ಯಾಂಪಸ್ ಅನ್ನು ಹ್ಯಾಲೋವೀನ್ ಸೆಟ್ಟಿಂಗ್ ಆಗಿ ಮಾರ್ಪಟ್ಟಿತ್ತು, ಭೂತ ಮನೆ, ಅಸ್ಥಿಪಂಜರ, ಕುಂಬಳಕಾಯಿ, ಬಾವಲಿಗಳು, ದೆವ್ವಗಳು ಮತ್ತು ಬೆರಗುಗೊಳಿಸುವ ಮಿಂಚಿನ ಲೈಟಿಂಗ್ ನ್ನು ಅಳವಡಿಸಲಾಗಿತ್ತು.
ದೆವ್ವಗಳು, ಮಾಟಗಾತಿಯರು, ದೇವತೆಗಳು ಸೇರಿದಂತೆ ವಿವಿಧ ವೇಶಭೂಷಣವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧರಿಸಿದ್ದರು.
ಹ್ಯಾಲೋವೀನ್ ಸಂಭ್ರಮಾಚರಣೆಯ ಪ್ರಮುಖ ಉದ್ದೇಶ ರೋಮಾಂಚಕ, ಭಯಾನಕ ನೃತ್ಯ ಪ್ರದರ್ಶನವಾಗಿದ್ದು, ಅದು ಎಲ್ಲರೂ ಸಂತೋಷದಿಂದ ಕಿರುಚುವಂತೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಎಲ್ಲರು ಸಂತೋಷದಿಂದ ಕಣ್ತುಂಬಿಕೊಂಡರು.