ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವೀನ್ ಡೇ ಸಂಭ್ರಮಾಚರಣೆ: ಯಕ್ಷ-ಯಕ್ಷಣಿಯರ ವೇಷ ಧರಿಸಿ ಗಮನ ಸೆಳೆದ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿ

ಎಲ್ಲಾ ಸಂತರ ಕ್ರಿಶ್ಚಿಯನ್ ಹಬ್ಬದ ಮುನ್ನಾದಿನದಂದು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ. ಚರ್ಚ್‌ನ ಸಂತರನ್ನು ಗೌರವಿಸಲು ಇದನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಆದ್ದರಿಂದ ಪ್ರಪಂಚದಾದ್ಯಂತ ಹ್ಯಾಲೋವೀನ್ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

ಅದೇರೀತಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವಿನ್ ಡೇ ಆಚರಣೆ ಮಾಡಲಾಗಿದ್ದು, ಹಬ್ಬದ ಸಂಪ್ರದಾಯದಂತೆ ಶಾಲಾ ಪುಠಾಣಿಗಳು ವಿಭಿನ್ನವಾದ ಪ್ರೇತಗಳ ವೇಷ ಧರಿಸಿ ಗಮನ ಸೆಳೆದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿದ್ದ “ಹಲೋ ವಿನ್ ಡೇ ಸೆಲೆಬ್ರೇಷನ್” ಈಗ ನಮ್ಮ ಎನ್‌.ಪಿ.ಎಸ್ ನಲ್ಲೂ ಆಚರಿಸಲಾಗಿದೆ. ಇದು ಒಂದು ಕ್ರಿಶ್ಚಿಯನ್ ಸಮುದಾಯದ ಆಚರಣೆಯಾಗಿದೆ. ಪೂರ್ವಿಕರ ಆತ್ಮಗಳನ್ನು ಆರಾಧಿಸುವ ಸಲುವಾಗಿ ಆಚರಣೆಯಲ್ಲಿದ್ದ ಹಾಲೋಯಿಂಗ್ ಡೇ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ವಿವಿಧ ರೀತಿಯ ಭಯಾನಕ ನೋಟ, ಯಕ್ಷ-ಯಕ್ಷಣಿಯರು, ಮಾಟಗಾತಿಯರ ಹಾಗೆ ವಿನ್ಯಾಸದ ಉಡುಗೆ ತೊಡುಗೆಗಳನ್ನು ಧರಿಸಿದ್ದರು ಹಾಗೂ ಮಕ್ಕಳ ಜೊತೆ ಶಿಕ್ಷಕರು ಭಾಗಿಯಾಗಿ ಸಂಭ್ರಮಿಸಿದರು ಎಂದು ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷರಾದ ಸತೀಶ್ ಕುಮಾರ್ , ಆಡಳಿತಾಧಿಕಾರಿ ಬಿಂದು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಹ್ಯಾಲೋವೀನ್ ದಿನವನ್ನು ಏಕೆ ಆಚರಿಸಲಾಗುತ್ತದೆ?

ಚರ್ಚ್‌ನ ಸಂತರನ್ನು ಗೌರವಿಸಲು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ.  ಹ್ಯಾಲೋವೀನ್‌ನ ಮೂಲವು 2,000 ವರ್ಷಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್, ಉತ್ತರ ಫ್ರಾನ್ಸ್ ಮತ್ತು ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಸೆಲ್ಟಿಕ್ ತಮ್ಮ ಹಬ್ಬವನ್ನು ಸಂಹೈನ್ ಎಂದು ಆಚರಿಸುತ್ತಿದ್ದರು. ಇದು ಬೇಸಿಗೆಯ ಅಂತ್ಯ ಮತ್ತು ಶೀತ ಚಳಿಗಾಲದ ದಿನಗಳ ಆರಂಭವನ್ನು ಗುರುತಿಸಿತು, ಅದು ಆ ಸಮಯದಲ್ಲಿ ಕೊಳೆತ ಮತ್ತು ಸಾವಿನೊಂದಿಗೆ ಸಂಬಂಧ ಹೊಂದಿತ್ತು. ಇದನ್ನು ತಪ್ಪಿಸಲು, ಜನರು ದೀಪೋತ್ಸವದ ಸುತ್ತಲೂ ದುಷ್ಟಶಕ್ತಿಗಳಿಂದ ರಕ್ಷಿಸಲು ಪ್ರಾರ್ಥಿಸುತ್ತಾರೆ.

ಹ್ಯಾಲೋವೀನ್ ದಿನವನ್ನು ಅ. 31 ರಂದೇ ಏಕೆ ಆಚರಿಸಲಾಗುತ್ತದೆ?

ಸೆಲ್ಟಿಕ್ ನಂಬಿಕೆಗಳ ಪ್ರಕಾರ, ಈ ದಿನವು ಬೇಸಿಗೆಯ ಅಂತ್ಯ ಮತ್ತು ಕತ್ತಲೆಯ ಸಮಯದ ಆರಂಭವನ್ನು ಸೂಚಿಸುತ್ತದೆ. ಅಕ್ಟೋಬರ್ 31 ರಂದು ಸತ್ತವರ ಮತ್ತು ಬದುಕಿರುವವರ ಪ್ರಪಂಚದ ನಡುವಿನ ಗಡಿರೇಖೆಯು ಮಸುಕಾಗುತ್ತದೆ. ಸತ್ತವರ ಪ್ರೇತಗಳು ಅಕ್ಟೋಬರ್ 31 ರ ರಾತ್ರಿ ಜಗತ್ತಿಗೆ ಮರಳಿದವು ಎಂಬ ನಂಬಿಕೆ ಇದೆ. ಆದ್ದರಿಂದ ಈ ಆಚರಣೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *