ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಫಾರ್ಮ್ ಪಾರ್ಟಿ: ಸಂತಸದಿಂದ ಪ್ರಾಣಿಗಳ ಜೊತೆಯಲ್ಲಿ ಸಮಯ ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ 2 ರಿಂದ 5:00 ವರೆಗೆ ಕಿಡ್ಸ್ ಕಾರ್ನಿವಲ್ / ಫಾರ್ಮ್ ಪಾರ್ಟಿಯನ್ನು  ಆಯೋಜಿಸಲಾಗಿತ್ತು .

ಇದರಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ, ಪೋಷಕರಿಗೆ ಮ್ಯಾಜಿಕ್ ಶೋ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ರ‍್ಯಾಂಪ್ ವಾಕ್, ಆರ್ಚರಿ, ಬ್ಯಾಸ್ಕೆಟ್ಬಾಲ್, ನೆಟ್ ಬ್ಯಾಲೆನ್ಸಿಂಗ್ ಆಟಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಗೆದ್ದವರಿಗೆ ಬಹುಮಾನಗಳನ್ನು ಸಹ ವಿತರಿಸಲಾಯಿತು. ಇದರಿಂದ ಎಲ್ಲಾ ಪೋಷಕರು ವಿದ್ಯಾರ್ಥಿಗಳು ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮೂಲಕ ಕ್ರಿಯಾತ್ಮಕ ಅನುಭವ ಮತ್ತು ಮನರಂಜನೆಯನ್ನು ಪಡೆದುಕೊಂಡರು.

ಮ್ಯಾಜಿಕ್ ಶೋ ಮೂಲಕ ವಿವಿಧ ರೀತಿಯ ಮ್ಯಾಜಿಕ್ ಗಳನ್ನು ಮಾಡಿ ತೋರಿಸಿದರು. ತಮ್ಮ ಮಾಂತ್ರಿಕ ಶಕ್ತಿಯ ಮೂಲಕ ವಿವಿಧ ವಸ್ತುಗಳನ್ನು ಉಪಯೋಗಿಸಿ ವಿವಿಧ ರೀತಿಯ ಮ್ಯಾಜಿಕ್ ಗಳನ್ನು ಪ್ರದರ್ಶಿಸಿ ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ನಿಬ್ಬೆರಗಾಗಿಸಿದರು. ಇದನ್ನು ಕಂಡ ವಿದ್ಯಾರ್ಥಿಗಳು ಪೋಷಕರು ಅಚ್ಚರಿ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿದರು ಈ ಮ್ಯಾಜಿಕ್ ಶೋ ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತು.

ಹಾಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರ‍್ಯಾಂಪ್ ವಾಕ್ ಅನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಎಲ್ಲರ ಗಮನವನ್ನು ಸೆಳೆದರು. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನವನ್ನು ಸಹ ವಿತರಿಸಲಾಯಿತು.

ವಿದ್ಯಾರ್ಥಿಗಳು ಡೈನೋಸಾರ್, ಚಿಟ್ಟೆ, ಫ್ಲವರ್ಸ್, ರೈನ್ಬೋ, ತ್ರಿಶೂಲ ಇನ್ನು ಮುಂತಾದ ಚಿತ್ರಗಳ ಟ್ಯಾಟುಗಳನ್ನು ಹಾಕಿಸಿಕೊಳ್ಳುವ ಮೂಲಕ ಸಂತಸಪಟ್ಟರು.

ವಿವಿಧ ಸಾಕುಪ್ರಾಣಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಹಿಮಾಲಯ ಕ್ಯಾಟ್ ಬೆಂಗಾಲ್ ಕ್ಯಾಟ್ ಪರ್ಷಿಯನ್ ಕ್ಯಾಟ್, ಲವ್ ಬರ್ಡ್ಸ್, ಆಫ್ರಿಕನ್ ಲವ್ ಬರ್ಡ್ಸ್, ಕಾಕ್ಟೈಲ್ಸ್ , ಕೊನೂರ್, ಫ್ಯಾನ್ ಟೈಲ್ ಪಿಜನ್, ನಾರ್ಮಲ್ ಪಿಜನ್, ಹೆನ್ , ಕಲರ್ ಚಿಕ್ಸ್ , ಗೂಸ್, ಟರ್ಕಿ, ರಾಬಿಟ್ಸ್, ನಾರ್ಮಲ್ ಗುನಿಯಾ, ಡ್ರಾಫ್ ಆಮ್ ಸ್ಟಾರ್, ಸೇರಿಯಾ ಆಮ್ ಸ್ಟಾರ್, ಗೆರ್ಬಿಲ್, ವೈಟ್ ರಾಟ್ಸ್, ಮೈಸ್ , ಡಾಗ್ ಪಪ್ಪಿ, ಕುದುರೆ, ಜಟಕಾ ಬಂಡಿ, ಲಗೂನ ವಿವಿಧ ರೀತಿಯ ಹಕ್ಕಿಗಳು ಪಕ್ಷಿಗಳು, ವಿವಿಧ ತಳಿಯ ನಾಯಿಗಳು, ಕುರಿ ಮೇಕೆಗಳು, ಹಸುಗಳು, ಇನ್ನು ಮುಂತಾದ ಹಲವಾರು ಪ್ರಾಣಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಅದರಲ್ಲೂ ಕುದುರೆ ಸವಾರಿ ಮತ್ತು ಜಟಕಾ ಬಂಡಿಯ ಸವಾರಿಯ ಮೂಲಕ ವಿದ್ಯಾರ್ಥಿಗಳು ಪೋಷಕರು ತುಂಬಾ ಉತ್ಸಾಹದಿಂದ ಸವಾರಿಯನ್ನು ಮಾಡುವ ಮೂಲಕ ಹೊಸ ಅನುಭವವನ್ನು ಪಡೆದರು. ಇದನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಹೊಸ ಅನುಭವದೊಂದಿಗೆ ಪ್ರಾಣಿಗಳ ಜೊತೆಯಲ್ಲಿ ಮನರಂಜನೆಯನ್ನು ಪಡೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಜೊತೆಯಲ್ಲಿ ಸಮಯವನ್ನು ಕಳೆಯುವುದು ಒಂದು ಉತ್ತಮ ವಿಷಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಪೋಷಕರಲ್ಲಿ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮತ್ತು ಒಂದು ಹೊಸ ಅನುಭವವನ್ನು ನೀಡುತ್ತದೆ.

ಕಿಡ್ಸ್ ಕಾರ್ನಿವಲ್/ ಫಾರ್ಮ್ ಪಾರ್ಟಿಯ ಕಾರ್ಯಕ್ರಮಕ್ಕೆ ಸುಮಾರು 2000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಎಲ್ಲರೂ ಸಹ ಆಟಗಳು, ಚಟುವಟಿಕೆಗಳು, ಪ್ರಾಣಿಗಳ ಜೊತೆಯಲ್ಲಿ ಸಮಯವನ್ನು ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು ತುಂಬಾ ಸಂತಸವನ್ನು ವ್ಯಕ್ತಪಡಿಸಿದರು.

ಇಡೀ ದೊಡ್ಡಬಳ್ಳಾಪುರದಲ್ಲಿ ಕಿಡ್ಸ್ ಕಾರ್ನಿವಲ್ ಎಂಬುದು ಒಂದು ವಿಶೇಷ ಚಿಂತನೆಯಾಗಿದ್ದು , ಒಂದು ಹೊಸ ಅನುಭವ ಮತ್ತು ಮನರಂಜನೆ ನೀಡುವ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮ ವೀಕ್ಷಿಸಿದ ಎಲ್ಲಾ ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ತಮ ಸ್ಪಂದನೆಯನ್ನು ನೀಡಿದ್ದು. ಮನಸ್ಸಿಗೆ ತೃಪ್ತಿಕರವಾಗಿದೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!