ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅರಳು ಮಲ್ಲಿಗೆ ಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ದೊಡ್ಡಬಳ್ಳಾಪುರ:2024 – 25 ನೇ ಸಾಲಿನ ಅರಳು ಮಲ್ಲಿಗೆ ಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶುಕ್ರವಾರ ನಗರದ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ನ್ಯಾಷನಲ್ ಪ್ರೈಡ್ ಶಾಲೆಯ ಕಾರ್ಯದರ್ಶಿಯಾದ ಸತೀಶ್ ರಾಜ್ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಶಿಸ್ತು ಮತ್ತು ಸಮಯ ಪಾಲನೆ ಎಲ್ಲರಲ್ಲೂ ಇರಬೇಕು ಎಂದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕಂಠಪಾಠ, ಅಭಿನಯ ಗೀತೆ, ದೇಶಭಕ್ತಿ ಗೀತೆ, ಛದ್ಮ ವೇಷ, ಕವನ ವಾಚನ, ಪ್ರಬಂಧ, ಚಿತ್ರಕಲೆ, ಕ್ಲೇ ಮಾಡ್ಲಿಂಗ್ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದರು.

ನ್ಯಾಷನಲ್ ಪ್ರೈಡ್ ಶಾಲೆಯ ಸಂಸ್ಥಾಪಕ ಸಿ.ನಾಗರಾಜು,  ಪ್ರಾಂಶುಪಾಲರಾದ ರಶ್ಮಿ, ಆಡಳಿತಾಧಿಕಾರಿ ಬಿಂದು, ಎಂಎಸ್ವಿ ಶಾಲೆಯ ಸಂಸ್ಥಾಪಕ ಎ. ಸುಬ್ರಹ್ಮಣ್ಯ, ಅರಳು ಮಲ್ಲಿಗೆ ಬಾಗಿಲು ಕ್ಲಸ್ಟರ್  ಸಿ.ಆರ್.ಪಿ ರಾಜಶೇಖರ್,  ಇ.ಸಿ. ಓ ಜಯಶ್ರೀ ಹಾಗೂ ಹಲವು ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರಾದ ರಾಜು, ರಾಮಕೃಷ್ಣಯ್ಯ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!