ಭಾರತದ ‘ಉಕ್ಕಿನ ಮನುಷ್ಯ’ ಎಂದೇ ಹೆಸರುವಾಸಿಯಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಅ.31ರಂದು ರಾಷ್ಟ್ರೀಯಾ ‘ಏಕತಾ ದಿನ’ವನ್ನಾಗಿ ಆಚರಣೆ ಮಾಡಲಾಗುತ್ತದೆ.
550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನ ಭಾರತದ ಒಕ್ಕೂಟಕ್ಕೆ ಸಂಯೋಜಿಸಿರುವ ಸಾಧನೆಯನ್ನ ಗೌರವಿಸಲು ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನ ರಾಷ್ಟ್ರೀಯ ಏಕತಾ ದಿನವೆಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ.
ಈ ಹಿನ್ನೆಲೆ ಇಂದು ನಗರದ ನ್ಯಾಷನಲ್ ಪ್ರೈಡ್ ಶಾಲಾ ಆವರಣದಲ್ಲಿ ಶಾಲಾ ಪುಠಾಣಿಗಳು ಏಕತೆಯಿಂದ ನಾವೆಲ್ಲಾ ಒಂದೇ ಎಂದು ಪ್ರಮಾಣ ಮಾಡುವುದರ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಮರ್ಪಿಸಿದರು.
ಈ ವೇಳೆ ನ್ಯಾಷನಲ್ ಪ್ರೈಡ್ ಶಾಲಾ ಸತೀಶ್, ಶಾಲಾ ಶಿಕ್ಷಕ ವೃಂದ್ಧ, ಶಾಲಾ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.