ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್‌ ನಂ.1: 10 ರಲ್ಲಿ 6.38 ಅಂಕಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದ ಕರ್ನಾಟಕ ಪೊಲೀಸ್ ಇಲಾಖೆ

ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್‌ ನಂ.1 ಸ್ಥಾನ ಪಡೆದುಕೊಂಡಿದೆ. 10 ರಲ್ಲಿ 6.38 ಅಂಕಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಜನತೆಗಾಗಿ ಹಗಲು ರಾತ್ರಿ ದುಡಿಯುವ ಕರ್ನಾಟಕ ಪೊಲೀಸ್‌ ಇಲಾಖೆಗೆ ಈ ಗರಿಮೆ ಸಂದಿರುವುದು ಹೆಮ್ಮೆಯ ಸಂಗತಿ.

ದೇಶದ ಪ್ರತಿಷ್ಠಿತ ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ ನವರು ನಡೆಸಿದ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice delivery) ಯಲ್ಲಿ ಪ್ರಥಮ‌ ಸ್ಥಾನದಲ್ಲಿದೆ. ಒಟ್ಟು 10 ಅಂಕಗಳನ್ನು ಆಧಾರವಾಗಿಟ್ಟು ನಡೆಸಿದ ಈ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ 6.38 ಅಂಕಗಳಿಕೆಯ ಮೂಲಕ ಪ್ರಥಮ‌ ಸ್ಥಾನದಲ್ಲಿದೆ.

ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು, ಅಪರಾಧಿಗಳ ಬಂಧನ, ಕೃತ್ಯದ ಸಾಕ್ಷ್ಯ ಸಂಗ್ರಹಣೆ ಹೀಗೆ ನ್ಯಾಯಾಲಯದಿಂದ ಪ್ರಕರಣದ ತೀರ್ಪು ಬಂದು ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್‌ ಇಲಾಖೆಯು ನಿರ್ಣಾಯಕ ಪಾತ್ರ ವಹಿಸಲಿದೆ. ಈ ಎಲ್ಲಾ ಕಾರ್ಯಗಳನ್ನು ನಾಡಿನ ಪೊಲೀಸ್‌ ಇಲಾಖೆ ದೇಶದ ಇತರೆ ಎಲ್ಲಾ ರಾಜ್ಯಗಳ ಪೊಲೀಸರಿಗಿಂತ ಅತ್ಯಂತ ದಕ್ಷವಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂಬುದು ಶ್ಲಾಘನೀಯ.

ನಾಗರಿಕರ ಪ್ರಾಣ ರಕ್ಷಣೆ, ಸಮಾಜಘಾತುಕರ ಹೆಡೆಮುರಿ ಕಟ್ಟಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕರ್ನಾಟಕ ಪೊಲೀಸ್‌ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಧನ್ಯವಾದಗಳನ್ನು ತಿಳಿಸಿದ್ದಾರೆ.

One thought on “ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್‌ ನಂ.1: 10 ರಲ್ಲಿ 6.38 ಅಂಕಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದ ಕರ್ನಾಟಕ ಪೊಲೀಸ್ ಇಲಾಖೆ

  1. ಒಂದು ಕಡೆ ಸಂತೋಷದ ವಿಚಾರ ಒಂದು ಕಡೆ ದುಃಖದ ವಿಚಾರ ಕರ್ನಾಟಕ ರಾಜ್ಯ ಎಲ್ಲ ರಾಜ್ಯಕ್ಕಿಂತ ಕಡಿಮೆ ಪೊಲೀಸ್ ಇಲಾಖೆಯ ಸಂಬಳ ನೌಕರಸ್ಥರು ನಾವು .
    ಇದರ ಬಗ್ಗೆ ಮಾಧ್ಯಮಗಳು ಹೇಳಿಕೆ ಯಾಕೆ ಇಲ್ಲ ?

Leave a Reply

Your email address will not be published. Required fields are marked *