ಆಸ್ತಿ ಖರೀದಿ ಮಾಡಿ ಹಣ ನೀಡುವಾಗ ನೋಟಿನ ಕಂತೆಗಳ ಮಧ್ಯೆ ಬಿಳಿ ಹಾಳೆಗಳನ್ನು ಇಟ್ಟು ವಂಚನೆ ಮಾಡುವಾಗ ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾದ ಭೂಪ.
ಮಂಡ್ಯ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಘಟನೆ ನಡೆದಿದೆ. ವಂಚಿಸಲು ಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಸೈಯದ್ ಅಮೀನ್. ಕೂಡಲೇ ಸೈಯದ್ ಅಮೀನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಲಾಯಿತು.
ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಉಮೇಶ್ ಅವರ ಬಳಿ ಜಮೀನು ಖರೀದಿ ಮಾಡಿದ್ದ ಸೈಯದ್ ಅಮೀನ್, ಉಮೇಶ್ ಅವರ ಜಮೀನು ಖರೀದಿಸಿ ಮುಂಗಡ ಹಣ ನೀಡುವಾಗ ನೋಟಿನ ಕಂತೆಯಲ್ಲಿ ಬಿಳಿ ಹಾಳೆ ಇಟ್ಟು ವಂಚನೆ ಮಾಡಲು ಯತ್ನಿಸಿದ ಸೈಯದ್ ಅಮೀನ್.
ನೋಂದಣಿ ಪ್ರಕ್ರಿಯೆ ಬಳಿಕ ಉಮೇಶ್ ಅವರಿಗೆ 30 ಲಕ್ಷ ನೀಡುವ ವೇಳೆ ವಂಚನೆಗೆ ಯತ್ನ ಮಾಡಿರೋ ಸೈಯದ್ ಅಮೀನ್. ಹಣ ಪಡೆದ ಲೆಕ್ಕಾಚಾರದಲ್ಲಿ ಇದ್ದಾಗ ನೋಟಿನ ಕಂತೆಗಳ ಮದ್ಯೆ ಬಿಳಿ ಕಾಗದಗಳು ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತು ಹಣ ನೀಡಿದ ಸೈಯದ್ ನನ್ನು ಪ್ರಶ್ನಿಸುತ್ತಾ ಕೂಗಾಡಿದ ಉಮೇಶ್.
ಆಗ ಸುತ್ತಮುತ್ತಲ ಸಾರ್ವಜನಿಕರು ಗುಂಪುಗೂಡಿದಾಗ ವಿಚಾರ ಬಹಿರಂಗವಾಗಿದೆ. ಕೂಡಲೇ ವಂಚಿಸಿದ ವ್ಯಕ್ತಿ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮುಂದುವರಿಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.