ದೊಡ್ಡಬಳ್ಳಾಪುರ : ನೋಂದಣಿಯ ವಿಚಾರಕ್ಕೆ ಇಬ್ಬರ ನಡುವೆ ನೂಕಾಟ ತಲ್ಲಾಟ ಆಗಿದ್ದು, ಓರ್ವನ ತಲೆಗೆ ಪೆಟ್ಟು ಬಿದ್ದಿದೆ. ಹಾಗೇ ಉಪ ನೋಂದಣಾಧಿಕಾರಿಗಳ ಕಚೇರಿ ಒಳಗಿನ ಕೌಂಟರ್ ಗಾಜು ಪುಡಿ ಪುಡಿಯಾಗಿವರುವ ಘಟನೆ ದೊಡ್ಡಬಳ್ಳಾಪುರ ಉಪ ನೋಂದಣಿ ಕಚೇರಿಯಲ್ಲಿಂದು ಸಂಜೆ ನಡೆದಿದೆ.
ನೋಂದಣಿಗೆ ಸಂಬಂಧಿಸಿದಂತೆ ಶ್ರೀಕಾಂತ್ ಮತ್ತು ಜಯಣ್ಣ ಎಂಬುವವರು ನಡುವೆ ಗಲಾಟೆಯಾಗಿದೆ. ಪತ್ರಬರಹಗಾರ ಜಯಣ್ಣ ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಅಸ್ಪತ್ರೆಗೆ ರವಾನಿಸಲಾಗಿದೆ.
ನಮ್ಮ ಫೈಲ್ ಮೊದಲು ಮಾಡಿ ಎಂದು ಜಗಳ ಪ್ರಾರಂಭವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡುವ ಹಂತಕ್ಕೆ ಹೋಗಿದೆ. ಜಯಣ್ಣ (54) ಹಲ್ಲೆಗೊಳಗಾದ ವ್ಯಕ್ತಿ. ಶ್ರೀಕಾಂತ್ ಎಂಬ ವ್ಯಕ್ತಿ ಹಲ್ಲೆ ಮಾಡಿದ್ದಾನೆ ಎಂದು ಜಯಣ್ಣ ಆರೋಪ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.