ಮನುಷ್ಯ ಸಾಮಾನ್ಯದವನಲ್ಲ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಗಾದೆ ಮಾತು, ಇಂದು ಎಲ್ಲೂ ಕೂಡ ಅದು ಅನ್ವಯಿಸುತ್ತಿಲ್ಲ. ಅವನ ಆಸೆಗಳಿಗೆ ಇತಿಮಿತಿಗಳು ಇಲ್ಲದೆ ಆಸೆ -ದುರಾಸೆಯಿಂದ ಪ್ರಕೃತಿಯ ಮೇಲೆ ದಬ್ಬಾಳಿಕೆಗಳು ನಡೆಯುವ ಘಟನೆಗಳ ಕಾವು ಇತ್ತೀಚಿನ ಬೆಳವಣಿಗೆಯಾಗಿಬಿಟ್ಟಿದೆ.
ಆಹಾರ ಗಳಿಕೆಯ ಕೇಂದ್ರವಾಗಿದ್ದ ಕೃಷಿ ಕೂಡ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಅಪಾರವಾದ ಅರಣ್ಯವನ್ನ ನಾಶ ಮಾಡಿ ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ಕಟ್ಟಿಕೊಳ್ಳಲಾಗಿದೆ.
ಪ್ರಕೃತಿದತ್ತವಾಗಿ ಅತ್ಯಂತ ಸಂಪತ್ಭರಿತವಾದ ನಮ್ಮ ಭಾರತ ನಿಜಕ್ಕೂ ನೈಸರ್ಗಿಕ ನಿರ್ಮಿತವಾದ ಅಪಾರವಾದ ಅರಣ್ಯಗಳನ್ನ ಹೊಂದಿರುವಂತ ದೊಡ್ಡ ದೇಶ.
ಅರಣ್ಯ ಲೋಕದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಸಾವಿರಾರು ಪ್ರಾಣಿ, ಪಕ್ಷಿಗಳ ಜೀವಸಂಕುಲಗಳಿವೆ ಎನ್ನುವುದನ್ನು ಮರೆತು, ಪ್ರಕೃತಿಯೊಂದಿಗೆ ಮತ್ತು ಜೀವ ಸಂಕುಲಗಳ ಜೊತೆ ಅಭಿವೃದ್ಧಿ ಹೆಸರಿನಲ್ಲಿ ಮಾನವನು ದಬ್ಬಾಳಿಕೆ ಮಾಡುತ್ತಿದ್ದಾನೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿ ಕೂಡ ತಾವು ನೆಲೆಸಿರುವ ಪರಿಸರದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಬದುಕುತ್ತಿರುತ್ತವೆ. ಈ ಶತಮಾನದ ಪ್ರಾರಂಭದಲ್ಲಿ ಭೂಮಿಯ ಮೇಲಿದ್ದ ಜೀವ ಪ್ರಭೇದಗಳು ಈಗಾಗಲೇ ನಶಿಸಿ ಹೋಗಿವೆ. ಕೆಲವು ಪ್ರಭೇದಗಳು ಅವಸಾನದ ಅಂಚಿನಲ್ಲಿವೆ. ಇಂತಹ ಜೀವ ಸಂಕುಲಗಳನ್ನು ಮತ್ತು ಅರಣ್ಯಗಳನ್ನು ರಕ್ಷಿಸುವ ಬದಲು ಭೂಮಿಯ ಮೇಲಿನ ಪರಿಸರವನ್ನು ಹಾಳುಗೆಡುವುದರಲ್ಲಿ ಮನುಷ್ಯ ಮುಖ್ಯ ಪಾತ್ರವಹಿಸುತ್ತಿದ್ದಾನೆ.
ಇದು ಕೇವಲ ಅಮೆರಿಕ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲಾ ದೇಶಗಳಲ್ಲೂ ಈ ಸಮಸ್ಯೆ ಕಂಡು ಬರುತ್ತದೆ. ದುರಾದೃಷ್ಟವೇನೆಂದರೆ ನಮ್ಮ ಭಾರತದಲ್ಲಿ ಕೂಡ ಪ್ರಗತಿಗಾಗಿ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಾಶ ಮಾಡಲಾಗುತ್ತಿದೆ. ಈಗ ಪ್ರಸ್ತುತ ನಡೆಯುತ್ತಿರುವ ಹೈದರಾಬಾದ್ ನ ಗಚ್ಚಿಬೌಲಿಯಲ್ಲಿ ಸುಮಾರು 400 ಎಕರೆ ಅರಣ್ಯ ಪ್ರದೇಶದ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
1974 ರಿಂದ ಹೈದರಾಬಾದ್ ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿರುವ 400 ಎಕರೆಗಳ ಅರಣ್ಯವನ್ನ ವಿವಿಧ ಉದ್ದೇಶಗಳಿಗಾಗಿ ಸರ್ವನಾಶ ಮಾಡಲಾಗುತ್ತಿದೆ. ಸದಾ ಹಚ್ಚ ಹಸಿರಿನಿಂದ ಕಂಗೊಳಿಸಿ ಅಲ್ಲಿನ ವಾತಾವರಣವನ್ನ ತಂಪಾಗಿಸುತ್ತಿದ್ದ ಅರಣ್ಯದಲ್ಲಿ ಈಗ ನೀರಸ ಮೌನ ಆವರಿಸಿದೆ.
ಇಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದರು ಕೂಡ ನಾವುಗಳು ಏಕೆ ಮೌನ ತಾಳುತಿದ್ದೇವೊ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿದೆ.
🖋📝🖊ಅಪ್ಪುರಾಜ್, ಸ್ನಾತಕೋತ್ತರ ವಿದ್ಯಾರ್ಥಿ
ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ…
ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…
ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…
ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…
ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…