Categories: Crime

ನೇರಳೇಘಟ್ಟ ಮಹಿಳೆ ಕೊಲೆ ಕೇಸ್: ಕೊಲೆಯಾದ ಶವವನ್ನು ಯಾರಿಗೂ ಗೊತ್ತಿಲ್ಲದೇ ಮಣ್ಣ ಮಾಡಲು‌ ಸಿದ್ಧತೆ: ವಿಚಾರ ತಿಳಿದ ಪೊಲೀಸ್ ಸ್ಥಳಕ್ಕೆ ದಿಢೀರ್ ಎಂಟ್ರಿ: ಮಣ್ಣಾಗುವ ಶವವನ್ನು ಶವಗಾರಕ್ಕೆ ರವಾನೆ: ಗಂಡನನ್ನ ವಶಕ್ಕೆ ಪಡೆದ ಪೊಲೀಸರು: ಮುಂದುವರಿದ ವಿಚಾರಣೆ

ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ಹಿನ್ನೆಲೆ ಗಂಡನೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ‌ ಕೇಳಿಬಂದಿದೆ.

ಘಟನೆ ತಾಲೂಕಿನ ನೇರಳೇಘಟ್ಟದಲ್ಲಿ ನಿನ್ನೆ ನಡೆದಿದೆ.

ಮನೆಯ ಗೋಡೆಗಳ ಮೇಲೆ ರಕ್ತದ ಕಲೆಗಳು, ನೆಲದ ಮೇಲೆ ರಕ್ತದ ಗುರುತು ಪತ್ತೆಯಾದ ಹಿನ್ನೆಲೆ ಗಂಡನೇ ನಿನ್ನೆ ರಾತ್ರಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ರಾಧಮ್ಮ(45), ಮೃತಪಟ್ಟ ಮಹಿಳೆ. ಗಂಡನ ಹೆಸರು ಲಕ್ಷ್ಮಯ್ಯ (50).

ಕೊಲೆ ನಂತರ ಇಂದು ಎಲ್ಲರನ್ನು ನಂಬಿಸಿ ಮಣ್ಣು ಮಾಡಲು ಸ್ಮಶಾನಕ್ಕೆ ಮೃತದೇಹವನ್ಮು ತೆಗೆದುಕೊಂಡು ಹೋಗಲಾಗಿತ್ತು. ಗಂಡನೇ ಪತ್ನಿಯನ್ನು ಕೊಂದಿರಬಹುದು ಎಂಬ ಅನುಮಾನದ ಮೇರೆಗೆ ಯಾರೋ ಅಪರಿಚತರು ದೊಡ್ಡಬಳ್ಳಾಪುರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.  ಇನ್ನೇನು ಮಣ್ಣು ಮಾಡುವಷ್ಟರಲ್ಲಿ ಪೊಲೀಸರು  ಎಂಟ್ರಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಅಪರಿಚತರ ಮಾಹಿತಿ ಮೆರೆಗೆ ಕೊನೆ ಕ್ಷಣದಲ್ಲಿ ಮಣ್ಣಾಗುತ್ತಿದ್ದ ಮೃತ ದೇಹವನ್ನ ಪೊಲೀಸರು ಶವಾಗಾರಕ್ಕೆ ತಂದಿದ್ದಾರೆ. ಕೂಡಲೇ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Ramesh Babu

Journalist

Recent Posts

ಹೊಸ ವರ್ಷಾಚರಣೆಗೆ ಕ್ಷಣಗಣನೆ- ನ್ಯೂ ಇಯರ್ ಸೆಲೆಬ್ರೇಷನ್ ಗೆ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ನಿರ್ಬಂಧ

ಹೊಸ ವರ್ಷದ ಸ್ವಾಗತಕ್ಕೆ ಇಡೀ ರಾಜ್ಯವೇ ಸಜ್ಜಾಗುತ್ತಿದೆ. ಇತ್ತ ಹೊಸ ವರ್ಷದ ಆಚರಣೆ ನೆಪದಲ್ಲಿ ನಡೆಯುವ ಮೋಜು-ಮಸ್ತಿ, ಅನಾಹುತ ತಪ್ಪಿಸಿ,…

2 hours ago

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿ- ಇನ್ನೂ 76,430 ಮೆಟ್ರಿಕ್‌ ಟನ್‌ ಖರೀದಿಸಲು ಬಾಕಿಯಿದೆ- ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೆ ಯೋಜನೆಗಳ ಭೂಸ್ವಾಧೀನ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ…

3 hours ago

ಸ್ಲೋಚ್ ಕ್ಯಾಪ್ ಗೆ ವಿದಾಯ: ನೀಲಿ ಬಣ್ಣದ ಪೀಕ್ ಕ್ಯಾಪ್ ಧರಿಸಿ ಮಿಂಚಿದ ಬೆಂ ಗ್ರಾ ಜಿಲ್ಲಾ ಪೊಲೀಸ್ ಸಿಬ್ಬಂದಿ

1956ರ ದಶಕದಿಂದಲೂ ಪೊಲೀಸರು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಗೆ ವಿದಾಯ ಹೇಳುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ…

16 hours ago

ಹೊಸ ವರ್ಷಾಚರಣೆ: ಮಹಿಳೆಯರ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ ಪೊಲೀಸ್ ಇಲಾಖೆ ಕೈಗೊಳ್ಳಬೇಕು- ಸಿಎಂ ಸಿದ್ದರಾಮಯ್ಯ

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸೂಚನೆಗಳು…

17 hours ago

ಜ.1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲೈಟ್ ಕಡ್ಡಾಯ – ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ- ಡಿವೈಎಸ್ಪಿ ಪಾಂಡುರಂಗ

ಹೆಲ್ಮೆಟ್ ಧರಿಸದ ಕಾರಣದಿಂದಲೇ ಅಪಘಾತಗಳಲ್ಲಿ ಹೆಚ್ಚಿನ ಸಾವು, ನೋವುಗಳು ಸಂಭವಿಸುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಸಂಚಾರ ನಿಯಮ…

19 hours ago

ಹಿಟ್ & ರನ್: ಸಿಮೆಂಟ್ ಬಲ್ಕರ್ ಗೆ ಬೈಕ್ ಡಿಕ್ಕಿ: ಇಬ್ಬರು ಬೈಕ್ ಸವಾರರು ಸಾವು: ಸಿಮೆಂಟ್ ಬಲ್ಕರ್ ಪರಾರಿ

ಸಿಮೆಂಟ್ ಬಲ್ಕರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸುಮಾರು…

23 hours ago