ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ಹಿನ್ನೆಲೆ ಗಂಡನೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆ ತಾಲೂಕಿನ ನೇರಳೇಘಟ್ಟದಲ್ಲಿ ನಿನ್ನೆ ನಡೆದಿದೆ.
ಮನೆಯ ಗೋಡೆಗಳ ಮೇಲೆ ರಕ್ತದ ಕಲೆಗಳು, ನೆಲದ ಮೇಲೆ ರಕ್ತದ ಗುರುತು ಪತ್ತೆಯಾದ ಹಿನ್ನೆಲೆ ಗಂಡನೇ ನಿನ್ನೆ ರಾತ್ರಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ರಾಧಮ್ಮ(45), ಮೃತಪಟ್ಟ ಮಹಿಳೆ. ಗಂಡನ ಹೆಸರು ಲಕ್ಷ್ಮಯ್ಯ (50).
ಕೊಲೆ ನಂತರ ಇಂದು ಎಲ್ಲರನ್ನು ನಂಬಿಸಿ ಮಣ್ಣು ಮಾಡಲು ಸ್ಮಶಾನಕ್ಕೆ ಮೃತದೇಹವನ್ಮು ತೆಗೆದುಕೊಂಡು ಹೋಗಲಾಗಿತ್ತು. ಗಂಡನೇ ಪತ್ನಿಯನ್ನು ಕೊಂದಿರಬಹುದು ಎಂಬ ಅನುಮಾನದ ಮೇರೆಗೆ ಯಾರೋ ಅಪರಿಚತರು ದೊಡ್ಡಬಳ್ಳಾಪುರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಇನ್ನೇನು ಮಣ್ಣು ಮಾಡುವಷ್ಟರಲ್ಲಿ ಪೊಲೀಸರು ಎಂಟ್ರಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಅಪರಿಚತರ ಮಾಹಿತಿ ಮೆರೆಗೆ ಕೊನೆ ಕ್ಷಣದಲ್ಲಿ ಮಣ್ಣಾಗುತ್ತಿದ್ದ ಮೃತ ದೇಹವನ್ನ ಪೊಲೀಸರು ಶವಾಗಾರಕ್ಕೆ ತಂದಿದ್ದಾರೆ. ಕೂಡಲೇ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.