ನೇತ್ರದಾನ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಬ್ಸಿಡಿ ನಾರಾಯಣಪ್ಪ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾರಾಯಣಪ್ಪನವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಅ.9) ನಿಧನರಾಗಿದ್ದಾರೆ, ಶನಿವಾರ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇಂದು ನೇತ್ರದಾನ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಬ್ಸಿಡಿ ನಾರಾಯಣಪ್ಪ.

ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸಾಲ ಕೊಡಿಸುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಿದ್ದರು, ಈ ಕಾರಣದಿಂದ ಅವರನ್ನು ತೂಬಗೆರೆ ಸುತ್ತಮುತ್ತಲಿನ ರೈತರು ಸಬ್ಸಿಡಿ ನಾರಾಯಣಪ್ಪ ಅಂತಾನೇ ಕರೆಯುತ್ತಿದ್ದರು. ಆರ್.ಎಲ್.ಜಾಲಪ್ಪನವರು ಗರಡಿಯಲ್ಲಿ ಪಳಗಿದ ಮುಖಂಡರು, ಜೆ.ನರಸಿಂಹಸ್ವಾಮಿಯವರ ಸ್ನೇಹಿತರಾಗಿದ್ದರು. ತೂಬಗೆರೆಯಲ್ಲಿ ಅನ್ನದಾತರಾಗಿದ್ದ ಅವರು, ತೂಬಗೆರೆಯಲ್ಲಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಬರುವ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆಯನ್ನ ಮಾಡುತ್ತಿದ್ದರು, ಅವರ ಸಾವು ತೂಬಗೆರೆ ಹೋಬಳಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!