ವಯಾಟಿನಾ-19 ಎಂಬ ನೆಲ್ಲೂರು ತಳಿಯ ಹಸು ಬ್ರೆಜಿಲ್‌ನಲ್ಲಿ 40 ಕೋಟಿಗೆ ಮಾರಾಟವಾಗಿ ವಿಶ್ವದಾಖಲೆ ಮಾಡಿದೆ. 1,101 ಕೆಜಿ ತೂಕ ಇದ್ದು, ಇದು ಶಾಖ ಸಹಿಷ್ಣುತೆ, ಬಲವಾದ ರೋಗ ನಿರೋಧಕತೆ ಮತ್ತು ಉನ್ನತ ತಳಿಶಾಸ್ತ್ರ ಹೊಂದಿದೆ.
ಆಕರ್ಷಕ ಬಿಳಿ ತುಪ್ಪಳ, ಮೃದು ಚರ್ಮ ಮತ್ತು ಅಗಲ ಭುಜಗಳಿರುವ ವಿಯಾಟಿನಾ-19 ಹಸು ಬಿಸಿ ತಾಪಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಸರಿಸಮನಾದ ಗುಣಲಕ್ಷಣಗಳನ್ನು ಹೊಂದಿದೆ.
ಈ ಹಸು ಅಮೆರಿಕದ ಟೆಕ್ಸಾಸ್‌ನ ಫೋರ್ಟ್‌ವರ್ತ್‌ನಲ್ಲಿ ನಡೆದ ಚಾಂಪಿಯನ್ ಆಫ್ ದಿ ವರ್ಲ್ಡ್ ಸ್ಪರ್ಧೆಯಲ್ಲಿ ಮಿಸ್ ಸೌತ್ ಅಮೆರಿಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ನೆಲ್ಲೂರು ತಳಿಯ ಹಸುಗಳು ಭಾರತದ ಉಪತಳಿ ಎಂಬುದು ವಿಶೇಷ.