ನೆಪೋಲಿಯನ್ ಮಗನ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆ: ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ…..

ಆತನ ಹೆಸರು ಧನುಷ್. ಸದ್ಯ ಧನುಷ್ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಟೀಕೆ ಮಾಡಿದರೆ, ಇನ್ನು ಕೆಲವರು ಈತನನ್ನು ವರಿಸಿದ ವಧುವನ್ನ ಬಾಯಿತುಂಬಾ ಹೊಗಳುತ್ತಿದ್ದಾರೆ. ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ.

ತಮಿಳು ಸ್ಟಾರ್ ಹೀರೋ, ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ಕೇಂದ್ರ ಸಚಿವ ಸಾಫ್ಟ್‌ವೇರ್‌ ಉದ್ಯಮಿ ನೆಪೋಲಿಯನ್ ಸುಪುತ್ರ ಧನುಷ್. ಕೋಟಿ ಕೋಟಿ ಆಸ್ತಿ ಒಡೆಯ. ಈತ ಬೆಳೆಯುತ್ತಾ ಹೋದಂತೆ ಈತನಿಗೆ ಅಪರೂಪದ ಕಾಯಿಲೆಯೊಂದು ಒಕ್ಕರಿಸಿದೆ. ಆ ಕಾಯಿಲೆಯ ಹೆಸರು ಸ್ನಾಯು ಕ್ಷಯ(Muscular dystrophy). ಅಂದರೆ ಈತನ ಸ್ನಾಯುಗಳು ವಯಸ್ಸಾಗುತ್ತಾ ಆಗುತ್ತಾ ಹೋದಂತೆ ಕ್ಷಯವಾಗುತ್ತಾ, ಕ್ಷೀಣಿಸುತ್ತಾ, ದುರ್ಬಲವಾಗುತ್ತಾ ಹೋಗುತ್ತವೆ. ಈ ಕಾಯಿಲೆಯ ಸ್ಥಿತಿಯಲ್ಲಿರುವ ಧನುಷ್ ಗೆ ಈಗ ಕೈಕಾಲು ಎತ್ತುವುದಕ್ಕೂ ಆಗದ ಸ್ಥಿತಿ ಪ್ರಸ್ತುತ ಇದೆ.

ಈತನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿರುವ ನೆಪೋಲಿಯನ್ ದಂಪತಿ, ಇವತ್ತಿಗೂ ಅಲ್ಲಿಯೇ ಇದ್ದು, ಚಿಕಿತ್ಸೆ ಕೊಡಿಸುತ್ತಲೇ ಇದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಕೋಟಿ ಕೋಟಿ ಖರ್ಚಾಗುತ್ತಿದೆ. ಆದರೆ, ಧನುಷ್ ಆರೋಗ್ಯದಲ್ಲಿ ಯಾವ ಚೇತರಿಕೆಯೂ ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.

ಈತನ ಮಲಮೂತ್ರ ವಿಸರ್ಜನೆಯನ್ನೂ ಬೇರೊಬ್ಬರು ಮಾಡಿಸಬೇಕು. ಬಟ್ಟೆಯನ್ನು ತೊಡಿಸಬೇಕು. ಈತನಿಗೆ ಲೈಂಗಿಕ ಶಕ್ತಿಯೂ ಇಲ್ಲ ಎನ್ನಲಾಗುತ್ತಿದೆ. ಹೀಗಿದ್ದರೂ, ತಮ್ಮ ಮಗನಿಗೆ ಮದುವೆ ಮಾಡಬೇಕು ಎಂದು ತಂದೆ ಆಸೆಪಟ್ಟು ಮದುವೆ ಮಾಡಿದ್ದಾರೆ.

ನೆಪೋಲಿಯನ್ ದಂಪತಿಯ ಈ ಆಸೆಯನ್ನು ಈಡೇರಿಸಲು ಧನುಷ್ ನನ್ನು ಮದುವೆಯಾಗಲು ಅಕ್ಷಯ ಎಂಬ ಹುಡುಗಿ ಮುಂದೆ ಬಂದಳು. ಈಗ ಆಕೆಯ ಜೊತೆ ಧನುಷ್ ಮದುವೆಯಾಗಿದೆ. ಜಪಾನ್ ಟೋಕಿಯೋದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಧನುಷ್-ಅಕ್ಷಯ ಸತಿಪತಿಗಳಾಗಿದ್ದಾರೆ.

ಈಗ ಟೀಕೆ ಆಗುತ್ತಿರುವುದು ಇದಕ್ಕೆ. ದೈಹಿಕವಾಗಿ ಯಾವ ಶಕ್ತಿಯೂ ಇಲ್ಲದವನನ್ನು ಈ ಹುಡುಗಿ ಮದುವೆಯಾಗುವುದಕ್ಕೆ ಆತನ ಹೆಸರಲ್ಲಿದ್ದ ಕೋಟಿ ಕೋಟಿ ಆಸ್ತಿಯೇ ಕಾರಣ, ದುಡ್ಡಿದ್ದರೆ ಹುಡುಗಿಯರು ಎಂಥವನನ್ನು ಬೇಕಾದರೂ ಮದುವೆ ಆಗ್ತಾರೆ.. ಎಂದೆಲ್ಲ ಟೀಕೆ ಮಾಡ್ತಿದ್ದಾರೆ.

ಹಾಗಂತ ಎಲ್ಲರದ್ದೂ ಟೀಕೆ, ಲೇವಡಿ ಅಲ್ಲ. ಕೆಲವರು ಹೊಗಳಿಯೂ ಇದ್ದಾರೆ. ಎಲ್ಲರೂ ದೈಹಿಕವಾಗಿ ಸರಿ ಇರುವ ವ್ಯಕ್ತಿಯನ್ನಷ್ಟೇ ಮದುವೆ ಆಗುವುದಾಗಿದ್ದರೆ, ಜಗತ್ತಿನ ಕೋಟ್ಯಂತರ ವಿಕಲಚೇತನರು ಮದುವೆಯೇ ಆಗುತ್ತಿರಲಿಲ್ಲ. ಆಕೆಯನ್ನು ಟೀಕೆ ಮಾಡಬೇಡಿ ಎಂದು ಹೇಳುವವರೂ ಇದ್ದಾರೆ.

ಹಾಗಂತ ಅಕ್ಷಯ, ಅವಿದ್ಯಾವಂತೆಯೇನಲ್ಲ. ತೀರಾ ಬಡಕುಟುಂಬದವಳೂ ಅಲ್ಲ. ನರ್ಸಿಂಗ್ ಓದಿರುವ ಈಕೆ, ಈಗ ಧನುಷ್ ಅವರನ್ನು ವಿವಾಹವಾಗಿದ್ದಾರೆ.

Ramesh Babu

Journalist

Recent Posts

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

5 hours ago

ನಕಲಿ ಔಷಧಿಗಳ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್ ಪೊಲೀಸರ ವಶಕ್ಕೆ

ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್‌ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್…

1 day ago

ಒಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆಗೂ ಕುತ್ತು | ರಾಗಿ, ಮೆಕ್ಕೆಜೋಳಕ್ಕೆ ತೇವಾಂಶದ ಕೊರತೆ | ಕೆರೆ-ಕುಂಟೆಗಳು ಖಾಲಿ, ಮೇವಿನ ಕೊರತೆಯ ಆತಂಕ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಆತಂಕ…

1 day ago

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

2 days ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

2 days ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

3 days ago