ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್. ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಹಾಗೂ ಅಕ್ಷಯ ಲಿಯೋ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನಗರದ ಆರ್.ಎಲ್.ಜಾಲಪ್ಪ ಕ್ಯಾಂಪಸ್ ನಲ್ಲಿರುವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ನೂತನ 2024-25 ನೇ ಸಾಲಿನ ಎಲ್ಲಾ ಪದಾಧಿಕಾರಿಗಳು ಲಯನ್ ಬಿ.ಎಸ್. ರಾಜಶೇಖರಯ್ಯನವರ ಸಮ್ಮುಖದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಸೇವಾ ಚಟುವಟಿಕೆಗಳ ವಿವರಗಳನ್ನು ಕಾರ್ಯದರ್ಶಿ ಎನ್. ಆರ್. ಮುಕೇಶ್ ರವರು ಸಭೆಯಲ್ಲಿ ವಿವರವಾಗಿ ತಿಳಿಸಿದರು.
ಹಣಕಾಸಿನ ವಿಚಾರವನ್ನು ಖಜಾಂಚಿ ಎಸ್.ರವಿಕುಮಾರ್ ಅವರು ಸಭೆಯಲ್ಲಿ ವಿವರವಾಗಿ ತಿಳಿಸಿದರು.
ಈ ವೇಳೆ ಮಲ್ಟಿಪಲ್ ಕೌನ್ಸಿಲ್ ಛೇರ್ ಪರ್ಸನ್ ಲಯನ್ ಬಿ.ಎಸ್. ರಾಜಶೇಖರಯ್ಯ pmjf, ಜಿಲ್ಲಾ ಸಮನ್ವಯಾಧಿಕಾರಿ ಲಯನ್ ಬರ್ನಾಡ್ ಆರ್. ಚಿಟ್ಟಿ pmjf, ಉಪಾಧ್ಯಕ್ಷರು ಲಿಯೋ ಕ್ಲಬ್ ಜೆ. ರಾಜೇಂದ್ರpmjf, ಪ್ರಾಂತೀಯ ಅಧ್ಯಕ್ಷರು SDUET ಲಯನ್ ಎಂ.ಆರ್. ಶ್ರೀನಿವಾಸ್, pmjf, ವಲಯ್ಯಾಧ್ಯಕ್ಷರು ಲಯನ್ ಎಲ್.ಎನ್. ಪ್ರದೀಪ್ ಕುಮಾರ್, pmjf, ಅಧ್ಯಕ್ಷರು LCDRLJ ಲಯನ್ ಡಾ. ಎಂ. ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.