
ನೀರು ಬರುವ ಕೊಳಾಯಿಯಲ್ಲಿ ನೀರು ಬದಲಾಗಿದೆ ಹೊಗೆ ಹೊರಬಂದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ಎಂ.ಜಿ ರಸ್ತೆಯಲ್ಲಿ ನಡೆದಿದೆ.
ಶಾರ್ಟ್ ಸೆರ್ಕ್ಯೂಟ್ ಆಗಿ ನಲ್ಲಿಯಲ್ಲಿ ಹೊಗೆ ಬಂದಿದೆ ಎನ್ನಲಾಗಿದೆ. ಗ್ಯಾಸ್ ಪೈಪ್ ನಿಂದ ಅನಿಲ ಸೋರಿಕೆಯಾಗ್ತಿದೆ ಎಂದು ನಿವಾಸಿಗಳು ಗಾಬರಿಗೊಂಡಿದ್ದರು.
ವಿದ್ಯುತ್ ಸಂಪರ್ಕದ ವೈರ್ ನೆಲಸುರಂಗದಲ್ಲಿ ಸುಟ್ಟಿರಬಹುದು ಎಂದು ಶಂಕಿಸಲಾಗಿದೆ. ಕೆಲಕಾಲ ಗಾಬರಿಯಾಗಿ ಮನೆಯಿಂದ ಹೊರಬಂದಿದ್ದ ನಿವಾಸಿಗಳು. ಕೂಡಲೇ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.