ನೀರಿನಿಂದ ಹೊರಬಂದ 8 ಅಡಿ ಉದ್ದದ ಮೊಸಳೆ: ಮತ್ತೆ ನೀರಿಗೆ ಹೋಗಲು ಹೆಣಗಾಟ: ಗಾಬರಿಗೊಂಡ ಜನ

ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನರೋರಾ ಗಂಗಾ ಬ್ಯಾರೇಜ್‌ನಲ್ಲಿ ಎಂಟು ಅಡಿ ಉದ್ದದ ಮೊಸಳೆಯೊಂದು ಕಾಲುವೆಯಿಂದ ಹೊರಬಂದಿದೆ.

 ಈ ಮೊಸಳೆ ಮತ್ತೆ ನೀರಿಗೆ ಹೋಗಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿನ ಫುಲ್ ವೈರಲ್ ಆಗಿದೆ.  ಈ ಘಟನೆಯು ಸುತ್ತಮುತ್ತಲಿನ ಜನರಲ್ಲಿ ಭಯವನ್ನು ಉಂಟುಮಾಡಿತ್ತು.

ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ನೀರಿಗೆ ಹೋಗಲು ಹೆಣಗಾಡುತ್ತಿದ್ದ ಮೊಸಳೆಯನ್ನು ರಕ್ಷಿಸುವ ಕಾರ್ಯ ನಡೆಸಿದರು.

ಮೊಸಳೆಯನ್ನು ಹಿಡಿದ ನಂತರ, ಅಧಿಕಾರಿಗಳು ಅದರ ಕೈ ಕಾಲುಗಳನ್ನು ಕಟ್ಟಿಹಾಕಿದರು ಮತ್ತು ಜನರು ಅದನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟರು.

ಇದೇ ರೀತಿಯ ನಿದರ್ಶನಗಳು ನಗರದಲ್ಲಿ ನಡೆದಿವೆ.  ಅಕ್ಟೋಬರ್ 2022 ರಲ್ಲಿ, ಬುಲಂದ್‌ಶಹರ್‌ನ ಕಸ್ಬಾ ಪಹಾಸು ನಿವಾಸಿಗಳಲ್ಲಿ 10-ಅಡಿ ಉದ್ದದ ದೈತ್ಯ ಮೊಸಳೆಯು ಭೀತಿಯನ್ನು ಉಂಟುಮಾಡಿತು. ಸ್ಥಳೀಯರು ಮೊಸಳೆಯನ್ನು ಹಿಡಿದು ಓಡಿಸಲು ಯತ್ನಿಸಿದರಾದರೂ ವಿಫಲವಾಗಿತ್ತು.  ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಮೂರು ಗಂಟೆಗಳ ಬಳಿಕ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

Ramesh Babu

Journalist

Recent Posts

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

41 minutes ago

ದೊಡ್ಡಬಳ್ಳಾಪುರದಲ್ಲಿ ದಾಖಲೆಗಳಿಲ್ಲದೆ ವಾಸ: ಮೂವರು ವಿದೇಶಿ ಪ್ರಜೆಗಳ ವಶ

ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…

4 hours ago

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

7 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

7 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

8 hours ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

11 hours ago