ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಿ-ಆಲ್ಫತ್ ಕಂಪನಿ ಮ್ಯಾನೇಜರ್ ಸೀತಾ ಲಕ್ಷ್ಮಿ

ಜಗತ್ತಿನ ದುಃಖದ ಪಯಣ ಪ್ರಾರಂಭವಾಗಿದ್ದು ಆದ್ದರಿಂದ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಲು ಮನವಿ ಮಾಡಿದ ಬೆಂಗಳೂರಿನ ಆಲ್ಫತ್ ಕಂಪನಿ ಮ್ಯಾನೇಜರ್ ಶ್ರೀಮತಿ. ಸೀತಾ ಲಕ್ಷ್ಮಿ.

ಭೂಮಿ ದಿನ ಪ್ರಯುಕ್ತ ತಾಲೂಕಿನ ಶಿವಪುರ ಬಳಿಯ ಹುಲಿವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಜೀವನ್ ಮುಕ್ತಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಭೂಮಿ ದಿನ ಆಚರಣೆಯಲ್ಲಿ ಗಿಡ ನೆಡುವುದರ ಮೂಲಕ‌ ಆಚರಿಸಿ ಮಾತನಾಡಿದ ಅವರು, ಪ್ರಪಂಚದ ನೀರಿನಲ್ಲಿ ಕೇವಲ 2.7% ಮಾತ್ರ ಕುಡಿಯಲು ಯೋಗ್ಯವಾಗಿದೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ನೀರನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಿ ನೀರನ್ನು ಉಳಿಸೋಣ ಎಂದು ತಿಳಿಸಿದರು.

ನೀರಿನ ಬಿಕ್ಕಟ್ಟನ್ನು ಒಟ್ಟಾಗಿ ನಾಗರೀಕರು ಎದುರಿಸಿದರೆ ಭೂಮಿ ಉಳಿಸುವುದರೊಂದಿಗೆ ಮನುಕುಲ ಮತ್ತು ಜೀವ ಸಂಕುಲವನ್ನು ಸಂರಕ್ಷಿಸಬಹುದು ಎಂದರು.

ಈ ವೇಳೆ ಜೀವನ್ ಮುಕ್ತಿ ಮುಖ್ಯಾಧಿಕಾರಿ ರೂಪಾ,
ಬೀಯಿಂಗ್ ಸೋಶಿಯಲ್ನ ಏಕ್ ನಾಯ್ ಶೂರತ್, ಫೌಂಡೇಶನ್ ಬೆಂಗಳೂರು ಪೌಂಡರ್ ಪ್ರವೀಣ್ ಶುಕ್ಲ, ಡಾ ಹುಲಿಕಲ್ ನಟರಾಜ್ ಮತ್ತು ಜಯರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *