ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ರಾಜಘಟ್ಟ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹220553 ರೂಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
KA.50, B.2528 ಸಂಖ್ಯೆಯ ಕಾರಿನಲ್ಲಿ ನಲ್ಲಿ ಹಣ ಸಾಗಿಸುತ್ತಿದ್ದಾಗ ಚೆಕ್ ಪೋಸ್ಟ್ ಮುಖ್ಯಸ್ಥರಾದ ಶೀಲಾ ಮತ್ತವರ ತಂಡ ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಗಿದೆ.
ಕಾರಿನಲ್ಲಿ ಸಾಗಿಸುತ್ತಿದ್ದ ಹಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಗೆ ಸೇರಿದ್ದು ಎನ್ನಲಾಗಿದೆ. ಸಂಸ್ಥೆಯ ಅಧಿಕೃತ ಸಿಬ್ಬಂದಿಯಲ್ಲದವರು ಹಣ ಸಾಗಾಣಿಕೆ ಮಾಡುತ್ತಿದ್ದು, ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.