ದೇಶ ರಕ್ಷಣೆಗಾಗಿ 23 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಯೋಧನಿಗೆ ಮದಗೊಂಡನಹಳ್ಳಿ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಯೋಧನಾಗಿ ಜಮ್ಮು-ಕಾಶ್ಮೀರ_ ಜೈಪುರ್ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ತನ್ನ ಗ್ರಾಮಕ್ಕೆ ಮರಳಿದ ಯೋಧನಿಗೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದವರು ಶ್ರೀ ಶಕ್ತಿ ಸಂಘದ ಮಹಿಳೆಯರು, ಶಾಲಾ ಮಕ್ಕಳು ಸ್ನೇಹಿತರು ಸೇರಿ ಕಾಡನೂರು ಕೈಮರದ ಗೇಟ್‌ನಿಂದ ಬೈಕ್ ರ‌್ಯಾಲಿ ಮೂಲಕ ಪೂರ್ಣ ಕುಂಭ ಸ್ವಾಗತ ಕೋರಿ ಮೆರವಣಿಗೆ ಮೂಲಕ ಊರಿಗೆ ಬರ ಮಾಡಿಕೊಂಡರು.
ತಾನು ವ್ಯಾಸಂಗ ಮಾಡಿದ ಗ್ರಾಮದ ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಸೈನಿಕ
ಎಂ. ಆರ್. ಶ್ರೀನಿವಾಸ್ ದೇಶ ಬಲಿಷ್ಠವಾಗಬೇಕಾದರೆ
ಸೈನ್ಯ ಬಲಿಷ್ಠವಾಗಿರಬೇಕು ಎಂದು ಹೇಳಿದರು.
ತನ್ನ 23 ವರ್ಷದ ಸೇವಾ ಅನುಭವವನ್ನು ವಿಸ್ತಾರವಾಗಿ ವಿವರಿಸಿದ ಅವರು ಪ್ರತಿಯೊಂದು ಮನೆಯಲ್ಲೂ ಒಬ್ಬೊಬ್ಬ ಯೋಧ ದೇಶ ಸೇವೆಗೆ ದಾವಿಸಬೇಕು ಆಗ ದೇಶ ಬಲಿಷ್ಠವಾಗುತ್ತದೆ ನಾನು ಸೈನಿಕ ವೃತ್ತಿಯಲ್ಲಿದ್ದು ನಿವೃತ್ತನಾಗಿದ್ದು ನನ್ನ ಮಗನನ್ನು ನಾನು ಸೈನಿಕನನ್ನಾಗಿ ಮಾಡಬೇಕು ಎಂಬ ಹಂಬಲ ನನಗಿದೆ ದೇಶ ಸೇವೆಯೇ ಈಶ ಸೇವೆ ಎಂದರು.
ಈ ವೇದಿಕೆಯಲ್ಲಿ ಕೆಸ್ತೂರು ವಿಎಸ್ಎಸ್ಎನ್ ನಿರ್ದೇಶಕರಾದ ಕೆ.ಎಚ್. ಮಾರೆಗೌಡ್ರು,
ನಾರಾಯಣಪ್ಪ, ಮುಖ್ಯ ಶಿಕ್ಷಕಿ ಮಂಜುಳಾ ನಂಜೇಗೌಡ, ಹೇಮೇಂದ್ರ, ಮನು ಕುಮಾರ್ಮು, ಕೇಶ್ ನಾಗೇಶ್, ಶಿವ ಕುಮಾರ್, ಚಂದ್ರಶೇಖರ್, ಚೇತನ್ ಹಾಗೂ ಬೋಧಕ, ಬೋಧಕೇತರ ವರ್ಗ, ಅಕ್ಕಪಕ್ಕದ ಗ್ರಾಮದವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…
ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದಲ್ಲಿ ಪಾಪಿ ಪುತ್ರನೊಬ್ಬ ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದಿದ್ದಾನೆ. ಗಂಗಮ್ಮ (65), ಕೊಲೆಯಾದ ಮಹಿಳೆ.…
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…
ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…
ಡಿಪಿಎಲ್ ಸೀಸನ್-1 ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…