ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ: ಓಂಪ್ರಕಾಶ್ ಪತ್ನಿ‌ ಪಲ್ಲವಿ ವಶಕ್ಕೆ ಪಡೆದು ವಿಚಾರಣೆ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆ ಆಗಿದೆ ಎಂದು ವರದಿಯಾಗಿದೆ.

ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಅವರೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಪೊಲೀಸರು ಸಂಶಯವ್ಯಕ್ತಪಡಿಸಿದ್ದಾರೆ.

ಬಿಹಾರದ ಚಂಪಾರಣ್ ಮೂಲದವರಾಗಿದ್ದ 68 ವರ್ಷದ ಓಂ ಪ್ರಕಾಶ್ ಅವರು 1981ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ವಾಸವಾಗಿದ್ದರು.

ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದ ಓಂಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.

ಓಂ ಪ್ರಕಾಶ್ ಅವರು ಕರ್ನಾಟಕ ಗೃಹರಕ್ಷಕದಳ, ಅಗ್ನಿಶಾಮಕದಳಗಳಲ್ಲಿ ಮಹಾನಿರ್ದೇಶಕರಾಗಿದ್ದ ಅವರು, 2015ರಿಂದ 2017ರವರೆಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಬೆಂಗಳೂರಿನಲ್ಲಿ ನಿವೃತ್ತ DG ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಂಪ್ರಕಾಶ್ ಪತ್ನಿ‌ ಪಲ್ಲವಿ ವಶಕ್ಕೆ ಪಡೆದು ಡಿಸಿಪಿ ಸಾ.ರಾ ಫಾತೀಮಾ ಅವರಿಂದ ವಿಚಾರಣೆ ಮಾಡಲಾಗುತ್ತಿದೆ.

ಸದ್ಯ ಓಂಪ್ರಕಾಶ್ ‌ಕೊಲೆಗೆ ಬಳಸಿದ್ದ ಚಾಕು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತ್ನಿ ಪಲ್ಲವಿಯೇ ಓಂಪ್ರಕಾಶ್ ಜೊತೆ ಜಗಳವಾಡಿ ಚಾಕುವಿನಿಂದ ಚುಚ್ಚಿಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಓಂಪ್ರಕಾಶ್ ಅವರು ಇತ್ತಿಚಿಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪ್ರತಿದಿನ ಪತಿ ಹಾಗು ಪತ್ನಿ ನಡುವೆ ಜಗಳ ನಡೆಯುತ್ತಿತ್ತು, ಪ್ರತಿದಿನ ಮನೆಗೆ ಹೊಯ್ಸಳ ಸಿಬ್ಬಂದಿ ಹೋಗಿ ಸಮಾಧಾನ‌ ಮಾಡಿ ಬರುತ್ತಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *