ನಿರ್ಜನ ಪ್ರದೇಶದಲ್ಲಿ ನವಜಾತ ಹಸಗೂಸು ಪತ್ತೆ: ಅಳುವ ಕಂದನ ಶಬ್ಧ ಕೇಳಿ ರಕ್ಷಣೆ ಮಾಡಿರೋ ಸಾರ್ವಜನಿಕರು

ನಿರ್ಜನ ಪ್ರದೇಶದಲ್ಲಿ ನವಜಾತ ಹಸಗೂಸು ಪತ್ತೆಯಾಗಿರುವ ಘಟನೆ ಹಾಡೋನಹಳ್ಳಿ ಹಾಗೂ ತಿರುಮಗೊಂಡನಹಳ್ಳಿ ಸಮೀಪವಿರುವ ಖಾಲಿ‌ ಲೇಔಟ್ ನಲ್ಲಿ ಕಳೆದ ರಾತ್ರಿ ಸುಮಾರು 8 ಗಂಟೆಯಲ್ಲಿ ಪತ್ತೆಯಾಗಿದೆ.

ಲೇಔಟ್ ನಲ್ಲಿ ಮಗು ಅಳುತ್ತಿರುವ ಶಬ್ಧ ಸಾರ್ವಜನಿಕರ ಕಿವಿಗೆ ಬಿದ್ದಿದೆ. ಕೂಡಲೇ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದಾಗ ಮಗು ಪತ್ತೆಯಾಗಿದೆ. ಸದ್ಯ ವಾರದ ಹಿಂದೆ ಜನಿಸಿದ ಗಂಡು ಮಗುವನ್ನು ಯಾರೋ ಬಿಟ್ಟು ಹೋಗಿರಬಹುದು ಎಂದು ತಿಳಿದುಬಂದಿದೆ.

ಕೂಡಲೇ ಮಗುವನ್ನು ತಿರುಮಗೊಂಡನಹಳ್ಳಿ ಯುವಕರು ರಕ್ಷಣೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಗಿದೆ. ಮಗುವಿಗೆ ಯಾವುದೇ ಪ್ರಾಣಾಪಾಯವಿಲ್ಲ. ಮಗುವಿನ ತಂದೆ-ತಾಯಿ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….

Ramesh Babu

Journalist

Recent Posts

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

8 hours ago

ನಕಲಿ ಔಷಧಿಗಳ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್ ಪೊಲೀಸರ ವಶಕ್ಕೆ

ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್‌ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್…

1 day ago

ಒಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆಗೂ ಕುತ್ತು | ರಾಗಿ, ಮೆಕ್ಕೆಜೋಳಕ್ಕೆ ತೇವಾಂಶದ ಕೊರತೆ | ಕೆರೆ-ಕುಂಟೆಗಳು ಖಾಲಿ, ಮೇವಿನ ಕೊರತೆಯ ಆತಂಕ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಆತಂಕ…

1 day ago

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

2 days ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

2 days ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

3 days ago