ಕೋಲಾರ: ತಾಲೂಕಿನ ಕಲ್ಲಂಡೂರು ಗ್ರಾಮದ ಡಾ.ಕೆ ನಾಗರಾಜ್ ನೇತೃತ್ವದ ಶ್ರೀ ಮಂಜುನಾಥೇಶ್ವರ ವಿವಿಧೋದ್ದೇಶ ಸಂಸ್ಥೆ ಹಾಗೂ ಖಾದಿ ಗ್ರಾಮೋದ್ಯೋಗ ಆಯೋಗ ಕೆವಿಐಸಿಯ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ, ಬೆಂಗಳೂರಿನಲ್ಲಿ ಉಚಿತ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಯಂತ್ರಗಳು ಹಾಗೂ ವಿದ್ಯುತ್ ಚಾಲಿತ ತಿಗರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ವಿವಿಧೋದ್ದೇಶ ಸಂಸ್ಥೆಯ ಕಾರ್ಯದರ್ಶಿ ಡಾ.ಸಹನಾ ಮಾತನಾಡಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರಗಳು ಉಚಿತವಾಗಿ ನೀಡುವ ಯಂತ್ರಗಳನ್ನು ಸದುಪಯೋಗ ಮಾಡಿಕೊಂಡು, ಅದರಿಂದಾಗಿ ಚಿಕ್ಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿಕೊಂಡು ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಅವರು ಕೂಡ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ದಾರಿ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎಂಎಸ್ಎಂಇ ಹಾಗೂ ಕೆವಿಐಸಿಯ ವತಿಯಿಂದ ತರಬೇತಿ ಪಡೆದ ಯುವಕ ಯುವಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆವಿಐಸಿ ಕೇಂದ್ರದ ಮುಖ್ಯಸ್ಥ ಮನೋಜ್ ಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೆವಿಐಸಿ ರಾಜ್ಯ ನಿರ್ದೇಶಕ ಇಟ್ಟ ಮೋಹನ್ ರಾವ್, ದಕ್ಷಿಣ ಭಾರತ ಕುಂಬಾರ ಫೆಡರೇಶನ್ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಕೆ.ನಾಗರಾಜ್ ಹಾಗೂ ಕೆವಿಐಸಿಯ ಅಧಿಕಾರಿಗಳು, ಕುಂಬಾರ ಸಮುದಾಯದ ಮುಖಂಡರು ಇದ್ದರು