
ರಾಗಿ ಹುಲ್ಲು ಹೊತ್ತು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿ ಮೇಲಿಂದ ನೀರಿಲ್ಲದ ಕೆರೆಗೆ ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಕೆರೆ ಏರಿ ಮೇಲೆ ನಡೆದಿದೆ….
ನೆಲಮಂಗಲದಿಂದ ದೊಡ್ಡಬಳ್ಳಾಪುರಕ್ಕೆ ಬರುವ ವೇಳೆ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಘಟನೆ ನಡೆದಿದೆ.

ಇದೇ ಜಾಗದಲ್ಲಿ ಕೆಲ ದಿನಗಳಿಂದೆ ಕ್ಯಾಂಟರ್ ಲಾರಿ ಆಯಾತಪ್ಪಿ ಏರಿ ರಸ್ತೆಯಿಂದ ಕೆರೆ ಕಡೆಗೆ ಸ್ವಲ್ಪ ವಾಲಿತ್ತು. ಇಂದು ರಾಗಿ ಹುಲ್ಲಿನ ಲಾರಿ ಪಲ್ಟಿ ಹೊಡೆದಿದೆ.
ಕೆರೆ ಏರಿ ಮೇಲಿನ ರಸ್ತೆ ಕಿರಿದಾಗಿದ್ದು, ಇಲ್ಲಿ ಭಾರೀ ಗಾತ್ರದ ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಅತಿ ವೇಗ, ಓವರ್ ಟೇಕ್ ಮಾಡುವುದು, ಎದ್ವಾತದ್ವ ವಾಹನ ಚಲಾಯಿಸುವುದು ಇಲ್ಲಿನ ಅಪಘಾತಗಳಿಗೆ ಕಾರಣವಾಗಿದೆ….

ಕೆರೆ ಏರಿ ಮೇಲಿನ ರಸ್ತೆಯಲ್ಲಿ ಯಾವುದೇ ಸಂಚಾರಿ ನಿಯಮಗಳ ಸೂಚನ ಫಲಕಗಳು ಕಣ್ಮರೆಯಾಗಿವೆ. ರಸ್ತೆಯನ್ನು ಕಾಲಕ್ಕೆ ತಕ್ಕಂತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.