ನಿಗದಿತ ದಿನಾಂಕಗಳಂದೇ ರಾಗಿ ತರುವಂತೆ ರೈತರಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮನವಿ

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ದೊಡ್ಡಬಳ್ಳಾಪುರದ ಗುಂಡಮ್ಮಗೆರೆ ಕ್ರಾಸ್ ಬಳಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಸ್ಥಾಪಿಸಲಾಗಿರುವ ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ ತರುತ್ತಿರುವುದರಿಂದ ಜನಸಂದಣಿ ಉಂಟಾಗುತ್ತಿದೆ.

ರೈತರಿಗೆ ನೀಡಿರುವ ನಿಗದಿತ ದಿನಾಂಕಗಳಂದೇ ರೈತರು ತಮ್ಮ ರಾಗಿ ತರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.

ಎಲ್ಲಾ ನೋಂದಾಯಿತ ರೈತರ ರಾಗಿ ದಾಸ್ತಾನನ್ನು ತೆಗೆದುಕೊಳ್ಳಲಾಗುವುದು. ಜಿಲ್ಲೆಯ ರೈತ ಬಾಂಧವರು ಯಾವುದೇ ಆತಂಕಕ್ಕೆ ಒಳಗಾಗದೇ ತಮಗೆ ನೀಡಿರುವ ನಿಗದಿತ ದಿನಾಂಕಗಳಂದೇ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು.

ಹೆಚ್ಚಿನ ವಿವರಗಳಿಗೆ ಖರೀದಿ ಅಧಿಕಾರಿಗಳಾದ ಮಹೇಶ್ ಮೊ.ಸಂ.: 9964090996. 9036878847 ಅಥವಾ ಮುನಿರಾಜು ಮೊ.ಸಂ.: 6366021925 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *