ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ; ಬೆಂಬಲ ಯೋಜನೆಯಡಿ 50 ಕ್ವಿಂಟಾಲ್ ರಾಗಿ ಖರೀದಿ; ನೇಕಾರರ ಮಗ್ಗಗಳಿಗೆ 20 ಹೆಚ್.ಪಿವರೆಗೂ ಉಚಿತ ವಿದ್ಯುತ್ ನೀಡುತ್ತವೆ ಎಂದು ಸಿದ್ದರಾಮಯ್ಯ ಘೋಷಣೆ

ಜನರ ಮುಂದೆ ಬಿಜೆಪಿಯ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದೇವೆ. ಇದಕ್ಕೆ ಬಿಜೆಪಿ ಸರಕಾರದ ಪಾಪದ ಪುರಾಣ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ ಅವರು ಸತ್ಯ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದ ಮಾಜಿ ಸಿಎಂ ಸಿದ್ದರಾಮಯ್ಯ.

ನಾನು 5 ವರ್ಷ ಸಿಎಂ ಆಗಿದ್ದಾಗ ಬಿಜೆಪಿ ಅಧಿಕೃತ ವಿರೋಧ ಪಕ್ಷದಲ್ಲಿ ಇದ್ದರು. ಆಗ ಒಂದು ದಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಏನು ಬಾಯಲ್ಲಿ ಕಲ್ಲು ಸಿಕ್ಕಾಕೊಂಡಿತ್ತಾ..? ಯಾಕೆ ಆಗ ಪ್ರಶ್ನೆ ಮಾಡಲಿಲ್ಲ ಮಿಸ್ಟರ್ ಬಸವರಾಜು ಬೊಮ್ಮಾಯಿ.? ಎಂದು ಪ್ರಶ್ನಿಸಿದರು. ಈಗ ಸುಳ್ಳನ್ನು ಹೇಳಲು ಆರಂಭಿಸಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ. ಭೂತದ ಬಾಯಲ್ಲಿ ಮಂತ್ರ ಹೇಳಿಸುತ್ತಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಅವರಿಗೆ ಶಕ್ತಿ ಇಲ್ಲ. ಜೆಡಿಎಸ್ ನವರು ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಬಾಲ, ಬಿಜೆಪಿ ಬಂದರೆ ಬಿಜೆಪಿ ಬಾಲ ಹಿಡಿಯುತ್ತಾರೆ.
ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. 2 ವರ್ಷ 10 ತಿಂಗಳು ಮುಖ್ಯಮಂತ್ರಿ ಆಗಿದ್ದೀರಿ. ಆಗ ಪಂಚರತ್ನ ನೆನಪಗಲಿಲ್ಲವೆ. ಎಲೆಕ್ಷನ್ ಬಂದಾಗ ಮಾತ್ರ ಪಂಚರತ್ನ ನೆನಪಾಯ್ತಾ? ಕಳೆದ ಚುನಾವಣೆಯಲ್ಲಿ ನಾವು ಸಿಎಂ ಮಾಡಿದೇವು, ಕೊಟ್ಟ ಕುದುರೆಯನ್ನು ಏರಲಾದವನು ಧೀರನು ಅಲ್ಲ, ಶೂರನು ಅಲ್ಲ, ಎಂಬಂತೆ ಕುಮಾರಸ್ವಾಮಿ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದರು.

ಬಿಜೆಪಿ ಅವರು ಜನರ ಆಶೀರ್ವಾದ ಪಡದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಕೋಟ್ಯಾಂತರ ಹಣ ಖರ್ಚು ಮಾಡಿ ಶಾಸಕರನ್ನ ಖರೀದ ಮಾಡಿ ನಮ್ಮಿಂದ 14 ಜನ ಶಾಸಕರನ್ನು, ಜೆಡಿಎಸ್ ನಿಂದ 3 ಜನ ಶಾಸಕರನ್ನ ಖರೀದಿ ಮಾಡಿ ಅನೈತಿಕವಾಗಿ ಸರ್ಕಾರ ರಚಿಸಿದ್ದಾರೆ.

ನಾನು ಸಿಎಂ ಆಗಿದ್ದಾಗ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ 1600 ಕೋಟಿ ಅನುದಾನ ನೀಡಿದ್ದೆ. ದೊಡ್ಡಬಳ್ಳಾಪುರಕ್ಕೆ 32 ಸಾವಿರ ಮನೆಗಳನ್ನು ಕೊಟ್ಡಿದ್ದೇನೆ. ರಾಜ್ಯದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆ. ನೇಕಾರರಿಗೆ 20 ಹೆಚ್.ಪಿ ಉಚಿತ ವಿದ್ಯುತ್ ನೀಡಿದ್ದೆ. ಬಿಜೆಪಿ ಅವರು 5 ಹೆಚ್ಪಿ ಇಳಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಮತ್ತೆ 20 ಹೆಚ್.ಪಿಗೆ ಏರಿಕೆ ಮಾಡುತ್ತೇವೆ‌ ಎಂದರು.

Leave a Reply

Your email address will not be published. Required fields are marked *