ಕೇಂದ್ರದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಸ್ಪರ್ಧೆಯನ್ನಯೊಡ್ಡಿ ಸೋಲಿಸಲು ವಿರೋಧ ಪಕ್ಷಗಳೆಲ್ಲಾ ಒಗ್ಗೂಡಲು ಮುಂದೆ ಬಂದಿದ್ದು, ಎಲ್ಲಾ ಪ್ರತಿಪಕ್ಷ ನಾಯಕರುಗಳ ಎರಡನೇ ಸುತ್ತಿನ ಸಭೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.
ಸುಮಾರು 80 ಮಂದಿ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದು ಜುಲೈ 17ರಂದು ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದಾರೆ.
ಈ ಹಿನ್ನೆಲೆ ಔತಣಕೂಟ ಸಭೆಗೆ ವಿವಿಧ ಪಕ್ಷಗಳ ಮುಖಂಡರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೊಲ್ಕತ್ತಾ ಮತ್ತು ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಆಗಮನ ಮಾಡುತ್ತಿರೋ ವಿಪಕ್ಷ ನಾಯಕರು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರೇನ್, ಸಮಾಜವಾದಿ ಪಾರ್ಟಿಯ ಲಾಲ್ ಜಿ ವರ್ಮಾ, ರಾಮಚಂದ್ರ ರಾಜ್ಯಾಭಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಮೂವರು ನಾಯಕರನ್ನ ಶಾಸಕರಾದ ಶರತ್ ಬಚ್ಚೇಗೌಡ, ಎ.ಸಿ.ಶ್ರೀನಿವಾಸ್ ಬರಮಾಡಿಕೊಂಡರು.
ಒಬ್ಬೊಬ್ಬ ಪಾರ್ಟಿ ನಾಯಕರನ್ನ ಬರಮಾಡಿಕೊಳ್ಳಲು ಒಬ್ಬೋಬ್ವ ಶಾಸಕರ ನೇಮಕ ಮಾಡಲಾಗಿದೆ.