ನಗರ ದೇವತೆ ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಮೇ. 23ರಂದು ಮುತ್ಯಾಲಮ್ಮದೇವಿ ರಥೋತ್ಸವ ಬೆಳಿಗ್ಗೆ 11 ಗಂಟೆಗೆ ಮತ್ತು ಆರತಿಗಳು ಸಂಜೆ 4 ಗಂಟೆಯ ನಂತರ ನಡೆಯಲಿದೆ. ತಾಲ್ಲೂಕಿನ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ಶಾಂತಿನಗರ, ನಾಗಸಂದ್ರ, ಕೊಡಿಗೇಹಳ್ಳಿ, ರೋಜಿಪುರ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಸ್ಥರಿಂದ ನಡೆಯಲಿವೆ. ಮೇ 24ರಂದು ಹಗಲು ಪರಿಷೆ ನಡೆಯಲಿದೆ.
ರಾಜಗೋಪುರ ಉದ್ಘಾಟನೆ
ಶಾಂತಿನಗರದ ಮುತ್ಯಾಲಮ್ಮ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಜಗೋಪುರದ ಉದ್ಘಾಟನೆ, ಕುಂಭಾಭಿಷೇಕ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ನೇರವೇರಿತು. ಕಳಸ ಸ್ಥಾಪನೆ, ದೇವಾಲಯದಲ್ಲಿ ಮುತ್ಯಾಲಮ್ಮ ದೇವಿಗೆ ವಿಶೇಷ ಅಲಂಕಾರ, ಮಹಾ ಕುಂಭಾಭಿಷೇಕ, ಹೋಮ ಕಾರ್ಯಕ್ರಮಗಳು ನಡೆದವು.
ಈ ವೇಳೆ ರಾಜಗೋಪುರ ಸೇವಾಕರ್ತರಾದ
ಕೊರಟಗೆರೆ ಮಾಧುಸ್ವಾಮಿ ಕುಟುಂಬದವರು ಮತ್ತು ಭಕ್ತಾದಿಗಳು ಸೇರಿದಂತೆ ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ಟ್ರಸ್ಟ್ ಅಧ್ಯಕ್ಷ ಹನುಮಂತ, ಉಪಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ಹನುಮಂತರಾವ್, ಕಾರ್ಯದರ್ಶಿ ಪ್ರಭಾಕರ್, ಖಜಾಂಚಿ ಮಲ್ಲಣ್ಣ, ಡಿ.ಎನ್ ತಿಮ್ಮರಾಜು, ಅಪ್ಪಿ ವೆಂಕಟೇಶ್, ಜೆ.ಕುಮಾರ್, ಟ್ರಸ್ಟ್ ನ ಎಲ್ಲಾ ಸದಸ್ಯರು ಹಾಗೂ ಭಕ್ತಾದಿಗಳು ಭಾಗಿಯಾಗಿದ್ದರು.