ವಿಧಾನಸಭಾ ಚುನಾವಣಾ ಅಂಗವಾಗಿ ಮೇ.2ರ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಟಿ. ವೆಂಕಟರಮಣಯ್ಯ ಪರವಾಗಿ ನಗರದಲ್ಲಿ ರೋಡ್ ಶೋ ಮುಖಾಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತಯಾಚನೆ ಮಾಡಲಿದ್ದಾರೆ.
ನಾಳೆ ಸಂಜೆ 5 ಗಂಟೆಗೆ ನಗರದ ಡಾ.ರಾಜಕುಮಾರ್ ವೃತ್ತದ ಬಳಿಯಿಂದ ಆರಂಭವಾಗುವ ರೋಡ್ ಶೋ, ಹಳೇ ಬಸ್ ನಿಲ್ದಾಣ, ಸೌಂದರ್ಯಮಹಲ್ ವೃತ್ತ, ಚೌಕದ ಸರ್ಕಲ್ ಮುಖಾಂತರ ತಾಲ್ಲೂಕು ಕಚೇರಿ ವೃತ್ತಕ್ಕೆ ಆಗಮಿಸಿ ಮುಕ್ತಯಗೊಳ್ಳಲಿದೆ. ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ತಿಳಿಸಿದ್ದಾರೆ.