ನಾಳೆ (ಜು.29) ರಂದು ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ: ಭಕ್ತರಿಗೆ ವಿಶೇಷ ಆಹ್ವಾನ: ವಿಶೇಷ ಪೂಜೆ, ಭಕ್ತರಿಗೆ ಭೋಜನೆ ವ್ಯವಸ್ಥೆ

ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಾಗ ದೋಷ ನಿವಾರಣೆಗಾಗಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ನಾಗರ ಕಲ್ಲುಗಳಿಗೆ ಹಾಲು, ತುಪ್ಪ, ನೀರು ಎರೆದು ವಿಶೇಷ ಪೂಜೆ ಸಲ್ಲಿಸುತ್ತಾರೆ.

ನಾಳೆ ನಾಗರ ಪಂಚಮಿ ದಿನದಂದು ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಊಟದ ವ್ಯವಸ್ಥೆ, ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಲಾಗಿರುತ್ತದೆ.ದೇವರ ದರ್ಶನ ಮಾಡಲು ಬರುವ ವಿಶೇಷಚೇತನರು, ವೃದ್ಧರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ
ನಾಗರಾಧನೆಗೆ ಹೆಸರುವಾಸಿಯಾದ ಪ್ರಸಿದ್ಧ ಕ್ಷೇತ್ರವಾಗಿದ್ದು, ನಾಗರ ಪಂಚಮಿ ಸಂದರ್ಭದಲ್ಲಿ ಇಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಪೂಜಾ ವಿಧಾನ:
ಭಕ್ತರು ನಾಗರಕಲ್ಲುಗಳನ್ನು ಶುದ್ಧ ನೀರಿನಿಂದ ತೊಳೆದು, ಅರಿಶಿನ ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ, ಹಾಲೆರೆದು ಹರಕೆ ತೀರಿಸುತ್ತಾರೆ.

ನಂಬಿಕೆ:
ನಾಗರಕಲ್ಲಿಗೆ ತಣ್ಣೀರು ಎರೆದರೆ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದು ಅಣ್ಣ-ತಂಗಿಯರ ಹಬ್ಬವೆಂದೂ ಪ್ರತೀತಿ ಕೂಡ ಇದೆ.

ಈ ಹಿನ್ನೆಲೆ ನಾಳೆ ನಾಗರ ಪಂಚಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಿ.ಎನ್ ರಂಗಪ್ಪ, ಕೆ.ಎಸ್ ರವಿ, ಆರ್.ವಿ ಮಹೇಶ್ ಕುಮಾರ್, ಲಕ್ಷ್ಮಾ ನಾಯ್ಕ್, ಹೇಮಲತಾ ರಮೇಶ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!