ನಾಳೆ (ಜುಲೈ23) ಕವಿಪ್ರನಿನಿ ವತಿಯಿಂದ ದರ್ಗಾಜೋಗಿಹಳ್ಳಿ ಗ್ರಾಮ ಮಿತಿಯಲ್ಲಿರುವ 66ಕೆವಿ ಸಾಮರ್ಥ್ಯ ಇರುವ ಟವರ್ ನ್ನು ಎತ್ತರಗೊಳಿಸುವ ಕಾಮಗಾರಿಯನ್ನ ಹಮ್ಮಿಕೊಂಡಿದ್ದು, 66/11ಕೆವಿ ಡಿ.ಕ್ರಾಸ್ ಉಪಕೇಂದ್ರದಿಂದ ಹೊರಹೊಮ್ಮುತ್ತಿರುವ DF-7 local 1-11ಕೆವಿ ವಿದ್ಯುತ್ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಭಾಗಶಃ ದೊಡ್ಡಬಳ್ಳಾಪುರ ನಗರ, ದರ್ಗಾಜೋಗಿಹಳ್ಳಿ, ಜಾಲಪ್ಪ ಕಾಲೇಜ್ ರಸ್ತೆ, ಕುರುಬರಹಳ್ಳಿ, ಕರೇನಹಳ್ಳಿ, ಮುಕ್ತಾಂಭಿಕ ಬಡಾವಣೆ, ಸೋಮೇಶ್ವರ ಬಡಾವಣೆ, ಗಂಗಾಧರಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ದೊಡ್ಡಬಳ್ಳಾಪುರ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.