ಇತ್ತೀಚೆಗೆ ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ದಾಳಿ ಮಾಡಿದ್ದರು. ಕನ್ನಡಿಗರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ರಾಜ್ಯ ಸರಕಾರ ಮುಂದಾಗಲಿ ಎಂಬ ಕಾರಣಕ್ಕೆ ಹಲವು ಸಂಘಟನೆಗಳು ನಾಳೆ(ಮಾ.22) ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ – ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರಿಗೆ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ.
ಬಂದ್‌ನ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟವು ನೈತಿಕ ಬೆಂಬಲ ನೀಡಿದೆ. ಆದರೆ, ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಮಾರ್ಚ್ 22 ನಾಲ್ಕನೇ ಶನಿವಾರ ಆಗಿರುವ ಹಿನ್ನೆಲೆ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇರಲಿವೆ. ಉಳಿದಂತೆ ಸೇವಾ ವಲಯದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ.
ಏನು ಇರುತ್ತೆ…?
ನಮ್ಮ ಮೆಟ್ರೋ, ರೈಲು
ಬಿಎಂಟಿಸಿ ಬಸ್ ಸೇವೆ
ಕೆಎಸ್‌ಆರ್‌ಟಿಸಿ ಬಸ್ ಸೇವೆ
ಶಾಲಾ ಕಾಲೇಜುಗಳು
ತರಕಾರಿ, ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
ಆಸ್ಪತ್ರೆ, ವೈದ್ಯಕೀಯ ಸೇವೆಗಳು
ಉಪಹಾರ ಮಂದಿರ, ಹೋಟೆಲ್‌ಗಳು
ಬಾರ್, ರೆಸ್ಟೋರೆಂಟ್, ಪಬ್‌ಗಳು
ದೈನಂದಿನ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಮೆಡಿಕಲ್
ಆ್ಯಂಬುಲೆನ್ಸ್ , ಹೋಲ್ ಸೆಲ್ ಬಟ್ಟೆ ಅಂಗಡಿಗಳು ಇರಲಿವೆ
ಖಾಸಗಿ ಬಸ್, ಶಾಲಾ ವಾಹನ ಓಡಾಟ ಇರಲಿದೆ.
ಏರ್ ಪೋರ್ಟ್ ಟ್ಯಾಕ್ಸಿ ಸೇವೆ ಇರಲಿದೆ
ಶೇಕಡ 65ರಷ್ಟು ಆಟೋಗಳ ಸೇವೆ ಇರಲಿದೆ
ಏನು ಇರಲ್ಲ…?
ಓಲಾ-ಊಬರ್, ಆಟೋ ಸೇವೆ ವ್ಯತ್ಯಯ ಸಾಧ್ಯತೆ.
ಸಿನಿಮಾ ಮಂದಿರಗಳು ಬೆಳಗಿನ ಶೋ ಇರಲ್ಲ. ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ
ದೊಡ್ಡಬಳ್ಳಾಪುರದಲ್ಲಿ ಪರಿಸ್ಥಿತಿ ಹೇಗಿರಲಿದೆ…?
ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಯುಗಾದಿ ಹಬ್ಬ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಹಳಷ್ಟು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಬಂದ್ ಕೈ ಬಿಡಲು ನಿರ್ಧಾರ ಮಾಡಲಾಗಿದೆ.
ನಾಡು ನುಡಿ ವಿಚಾರವಾಗಿ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂಘ ಸಂಸ್ಥೆಗಳು ಹಿಂಜರಿದ ಉದಾಹರಣೆ ಎಂದಿಗೂ ಇಲ್ಲ, ಆದರೆ, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 21ರಿಂದ ಆರಂಭವಾಗಿದ್ದು , ನಾವು ಬಂದ್ ಗೆ ಕರೆ ನೀಡಿದರೆ, ಶಾಲಾ ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗುತ್ತದೆ. ಅಲ್ಲದೇ ಪರೀಕ್ಷೆ ಕೇಂದ್ರಗಳಿಗೆ ಮಕ್ಕಳು ತೆರಳಲು ಕಷ್ಟವಾಗುತ್ತದೆ. ಜೊತೆಗೆ ನಮ್ಮ ದೊಡ್ಡಬಳ್ಳಾಪುರ ಜನತೆ ಬಹುತೇಕ ನೇಕಾರಿಕಾ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಬಂದ್ ಮಾಡುವುದರಿಂದ ನೇಕಾರಿಕೆಯ ಮೇಲೆ ಪೆಟ್ಟು ಬೀಳುತ್ತದೆ. ಅಲ್ಲದೇ ಸ್ಥಳೀಯ ವ್ಯವಹಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ಸಂಘಟನೆ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಸರ್ವ ಸಂಘಟನೆಗಳ ಮುಖಂಡರು, ಪ್ರಮುಖರು ಒಮ್ಮತದಿಂದ ಮಾರ್ಚ್ 22ರಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.