ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ವತಿಯಿಂದ 2023ನೇ ಸಾಲಿನ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ
ತಾಲೂಕಿನ ಮೆಳೇಕೋಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆ. 6ರ ಮಧ್ಯಾಹ್ನ3:30ಕ್ಕೆ ಸಿರಿಧಾನ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿವಿಧ ಸಿರಿಧಾನ್ಯ ಆಹಾರ ಖಾದ್ಯಗಳಾದ ರಾಗಿ ಉಂಡೆ, ರಾಗಿ ಅಂಬಲಿ, ರಾಗಿ ಬರ್ಫಿ, ರಾಗಿ ಹಲ್ವಾ, ನವಣೆ ತಂಬಿಟ್ಟು, ನವಣೆ ಹೋಳಿಗೆ, ನವಣೆ ಹಲ್ವಾ, ಹರ್ಕಾ ಬರ್ಫಿ, ಹರ್ಕಾ ಉಂಡೆ, ಸಜ್ಜೆ ಉಂಡೆ, ಸಜ್ಜೆ ರೊಟ್ಟಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿರುತ್ತದೆ.
ಸಿರಿಧಾನ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ ತಿಳಿಸಿದ್ದಾರೆ.