ಕೋಲಾರ: ಬ್ರಹ್ಮಶ್ರೀ ನಾರಾಯಣಗುರು ಹೆಸರನ್ನು ಜೀವಂತವಾಗಿಡುವ ಸಲುವಾಗಿ ಜಿಲ್ಲಾಡಳಿತ ವತಿಯಿಂದ ನಗರದಲ್ಲಿನ ಯಾವುದಾದರೂ ರಸ್ತೆಗೆ ಅಥವಾ ಪಾರ್ಕ್ ಗೆ ನಾರಾಯಣಗುರು ಹೆಸರನ್ನು ನಾಮಕರಣ ಮಾಡುವಂತೆ ಈಡಿಗ ಸಮುದಾಯದ ಮುಖಂಡರು ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರಿಗೆ ಮನವಿ ಮಾಡಿದರು,
ನಗರದ ಸುವರ್ಣ ಕನ್ನಡ ಭವನದಲ್ಲಿ ಮಂಗಳವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ ಸಂದರ್ಶನದಲ್ಲಿ ಸಮುದಾಯದ ಮುಖಂಡರು ಮನವಿ ಮಾಡಿದರು ಇದಕ್ಕೆ ಶಾಸಕ ಮಾತನಾಡಿ ಸಮಾಜದಲ್ಲಿನ ಶೋಷಣೆಯ ಮುಕ್ತ ಬದುಕಿನ ಬದಲಾವಣೆಯಲ್ಲಿ ನಾರಾಯಣಗುರುಗಳ ಪಾತ್ರವು ಬಹುಮುಖ್ಯವಾಗಿದೆ ಅವರ ದಾರಿಯಲ್ಲಿ ಯುವ ಜನತೆ ನಡೆಯುವ ಅವಶ್ಯಕತೆ ಇದ್ದು ನಿಮ್ಮ ಮನವಿಯನ್ನು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುತ್ತೇನೆ ಜೊತೆಗೆ ಅವರ ಹೆಸರು ನಾಮಕರಣ ಮಾಡಲು ಕ್ರಮ ವಹಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ತೋರದೇವಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನುಕ್ಕನಹಳ್ಳಿ ಶ್ರೀನಿವಾಸ್, ಖಾದ್ರಿಪುರ ಬಾಬು ರಂಗವಿಜಯದ ಮಾಲೂರು ವಿಜಿ, ಈಡಿಗ ಸಮುದಾಯದ ಜಿಲ್ಲಾ ಅಧ್ಯಕ್ಷ ಮಾಸ್ತಿ ರಮೇಶ್, ಕಾರ್ಯದರ್ಶಿ ಮುನಿರಾಜು,ಮುಖಂಡ ನಾರಾಯಣಪ್ಪ ಮುಂತಾದವರು ಇದ್ದರು