ಚಿರತೆಯೊಂದು ನಾಯಿಯನ್ನು ಬೇಟೆಯಾಡಲು ನೇರವಾಗಿ ಗ್ರಾಮಕ್ಕೆ ನುಗ್ಗಿದೆ. ಆದರೆ, ವಿಫಲ ಯತ್ನದಲ್ಲಿ ಬಂದಿದ ದಾರಿಗೆ ಸುಂಕವಿಲ್ಲ ಎಂಬಂತೆ ಚಿರತೆ ವಾಪಸ್ ಹೊರಟಿದೆ.
ಘಟನೆ ತಾಲೂಕಿನ ಸೀಗೇಪಾಳ್ಯ ಗ್ರಾಮದಲ್ಲಿ ಕಳೆದ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ನಡೆದಿದೆ…
ಗ್ರಾಮಸ್ಥರು ಇನ್ನೂ ಓಡಾಡುತ್ತಿರುತ್ತಾರೆ. ಆ ವೇಳೆಯಲ್ಲೇ ನಾಯಿಯನ್ನು ಅಟ್ಟಾಡಿಸಿಕೊಂಡು ಬರುವ ಹಾಗೂ ಬಂದ ಮಾರ್ಗದಲ್ಲೇ ವಾಪಸ್ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದೃಷ್ಟವಶಾತ್ ನಾಯಿ ಹಾಗೂ ಜನರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿರತೆ ಗ್ರಾಮಕ್ಕೆ ಎಂಟ್ರಿ ಕೊಟ್ಟು ಎಲ್ಲರ ನಿದ್ದೆಗೆಡಿಸಿದೆ. ಕೂಡಲೇ ಚಿರತೆಯನ್ನು ಸೆರೆ ಹಿಡಿದು ಮುಂದೆ ಆಗಬಹುದಾದ ಅನಾಹುತ ತಡೆಯುವಂತೆ ಅರಣ್ಯ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.