ನಾಯಕರಂಡನಹಳ್ಳಿ ಬಳಿ ಭೀಕರ ಅಪಘಾತ ಪ್ರಕರಣ: ಬಸ್ಸಿನಲ್ಲಿ ಸಿಲುಕಿರುವ ಮಗು: ಸತತ ಒಂದು ಗಂಟೆಯಿಂದ ನಡೆಯುತ್ತಿರುವ ಮಗು ರಕ್ಷಣಾ ಕಾರ್ಯಾಚರಣೆ

ನಾಯಕರಂಡನಹಳ್ಳಿ ಬಳಿ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಒಂದು ಗಂಟೆಯಿಂದ ಬಸ್ಸಿನಲ್ಲಿ‌ ಸಿಲುಕಿರುವ ಬಾಲಕನನ್ನು ಹೊರತೆಗೆಯಲು ಹರಸಾಹಸಪಡಲಾಗುತ್ತಿದೆ….

ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಹಾದು ಹೋಗುವ ಹಿಂದೂಪುರ-ಯಲಹಂಕ ಹೆದ್ದಾರಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಲ್ಲಿದ್ದಲು ಲಾರಿ ನಡುವೆ ಭೀಕರ ಅಪಘಾತ ನಡೆದಿದೆ…

ಡಿಕ್ಕಿ ರಭಸಕ್ಕೆ ಕೆಎಸ್ ಆರ್ ಟಿಸಿ‌ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮುಂಭಾಗದಲ್ಲಿ ಕುಳಿತಿದ್ದ ಬಾಲಕ ಬಸ್ಸಿನಲ್ಲಿ ಸಿಲುಕಿಕೊಂಡಿದ್ದಾನೆ. ಬಾಲಕನನ್ನು ರಕ್ಷಣೆ ಮಾಡಲು‌ ಸತತ ಒಂದೂವರೆ ಗಂಟೆಯಿಂದಲೂ ಪ್ರಯತ್ನ ಮಾಡಲಾಗುತ್ತಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಬಾಲಕನನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಗೌರಿಬಿದನೂರು ಕಡೆಯಿಂದ ಕೆಎಸ್ ಆರ್ ಟಿಸಿ‌ ಬಸ್ ಹಾಗೂ ಕಲ್ಲಿದ್ದಲು ತುಂಬಿದ್ದ ಲಾರಿ ಬರುತ್ತಿದ್ದವು‌. ಮುಂದೆ ಕಲ್ಲಿದ್ದಲು ತುಂಬಿದ್ದ ಲಾರಿ ಹೋಗುತ್ತಿತ್ತು. ಹಿಂಬದಿಯಿಂದ ಕೆಎಸ್ ಆರ್ ಟಿಸಿ‌ ಬಸ್ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದಿದೆ..

ಘಟನೆಯಲ್ಲಿ ಕೆಎಸ್ ಆರ್ ಟಿಸಿ‌ ಬಸ್ ನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ….

Leave a Reply

Your email address will not be published. Required fields are marked *

error: Content is protected !!