Categories: ಕೋಲಾರ

ನಾನೇನು ಕೊಲೆಗಾರನಲ್ಲ ಯಾವುದೇ ತನಿಖೆಗೂ ಸಿದ್ಧ: ನನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಕೆಲವರಿಂದ ಅಪಪ್ರಚಾರ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: 2018ರಲ್ಲಿ ನನ್ನ ಮೇಲೆ ಕೇಸ್‌ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ. ನಂತರ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣ ಸಂಬಂಧ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಯಾರೇ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು

ನಗರದ ತಮ್ಮ ಕಚೇರಿಯಲ್ಲಿ ತಮ್ಮ ಮೇಲಿನ ಎಫ್‌ಐಆರ್‌ ವಿರುದ್ಧದ ಮೇಲ್ಮನವಿ ವಜಾ ಸಂಬಂಧ ಪ್ರತಿಕ್ರಿಯಿಸಿ ಅವರು ಈಗ ಏನೇನೋ ಊಹಾಪೋಹ ಎದ್ದಿದೆ. 2010ರಿಂದ ಇಂಥ ವಿಚಾರಗಳೇ ಚರ್ಚೆಯಲ್ಲಿವೆ. ಕೊತ್ತೂರು ಮಂಜುನಾಥ್‌ಗೆ ಈ ರೀತಿ ಆಗುತ್ತದೆ, ಆ ರೀತಿ ಆಗುತ್ತದೆ. ಶಾಸಕ ಸ್ಥಾನ ಹೋಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತಿ ಹೇಳಿಹೇಳಿಯೇ 2013ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ನನ್ನ ಮೇಲೆ ಸೋತಿದ್ದ ಮುನಿಆಂಜಿನಪ್ಪ ಅವರನ್ನು ದಾರಿ ತಪ್ಪಿಸಿದ್ದರು. ಆತನಿಂದ ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿದರು. ಈಗ ಅಂಥ ಮಾತು ಮತ್ತೆ ಶುರುವಾಗಿದೆ. ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.

ನನ್ನ ಬಗ್ಗೆ ಪೂರ್ಣ ಮಾಹಿತಿ ಬೇಕೆಂದರೆ ನನ್ನ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿದರೆ ಸಿಗುತ್ತದೆ. ನನ್ನ ತಂದೆ, ತಾಯಿ, ಹುಟ್ಟೂರು, ಅಜ್ಜ, ಅಜ್ಜಿ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ಮುಳಬಾಗಿಲಿನಲ್ಲಿ ನನ್ನ ಮೇಲೆ ಯಾರಾದರೂ ಪ್ರತಿಭಟನೆ ನಡೆಸಿದ್ದಾರೆಯೇ’ ಎಂದು ಪ್ರಶ್ನಿಸಿದ ಅವರು ಪ್ರಕರಣದಲ್ಲಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ತಪ್ಪಿಸಿಕೊಂಡು ಎಲ್ಲಿಗೂ ಹೋಗಲ್ಲ. ಸಮಸ್ಯೆ ಏನಾದರೂ ಇದ್ದಿದ್ದರೆ ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆನೆ ನಾನೇನು ಕೊಲೆ ಮಾಡಿದ್ದೇನೆಯೇ ಎಂದರು.

ಬಿಜೆಪಿಯವರು ಆರೋಪ ಮಾಡಿದಂತೆ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಯಾರೂ ಪ್ರಯತ್ನಿಸಿಲ್ಲ. ಕೊಲೆ ಮಾಡುವುದು ಎಂದರೆ ಏನು ದೇವಸ್ಥಾನದ ಮುಂದೆ ಕೋಳಿ, ಕುರಿ ಕುಯ್ಯುವುದೇ ಅಂದು ಬೆಳಗಾವಿಯಲ್ಲಿ ಅವರನ್ನು ಪೊಲೀಸರು ಹೊರಗಡೆ ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಒಂದು ವೇಳೆ ಆ ಸ್ಥಳದಲ್ಲಿದ್ದು, ಗಲಾಟೆ ಆಗಿದ್ದಾರೆ ಯಾರು ಜವಾಬ್ದಾರಿ ಆಗುತ್ತಿದ್ದರು ಆಗ ಪೊಲೀಸರು ಭದ್ರತೆ ನೀಡಿಲ್ಲ ಎಂಬುದಾಗಿ ಬಿಜೆಪಿಯವರು ತಗಾದೆ ತೆಗೆಯುತ್ತಿದ್ದರು ಶಾಸಕರನ್ನು ಕೊಲೆ ಮಾಡುವುದೆಂದರೆ ತಮಾಷೆನಾ ಹುಡುಗಾಟನಾ ಬಿಜೆಪಿಯವರು ಏನೋ ಮಾತನಾಡುತ್ತಾರೆ. ಅದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ತಿರುಗೇಟು ನೀಡಿದರು.

ಶಾಸಕ ಮುನಿರತ್ನ ಮೇಲೆ ಯಾರೂ ಪುಂಡರು ಮೊಟ್ಟೆ ಎಸೆದಿರಬಹುದು. ಕೊಲೆ ಮಾಡುವಂತಿದ್ದರೆ ಯಾರಾದರೂ ಹೇಳಿಕೊಂಡು ಬಂದು ಕೊಲೆ ಮಾಡುತ್ತಾರೆಯೇ? ಅದರಲ್ಲೂ ತಲೆ ಮಧ್ಯ ಭಾಗಕ್ಕೆ ಗುರಿ ಇಟ್ಟು ಮೊಟ್ಟೆ ಎಸೆದಿದ್ದಾರೆ. ಶಾರ್ಟ್‌ ಶೂಟರ್‌ಗಳಿಗೆ ಮಾತ್ರ ಅದು ಸಾಧ್ಯ. ನನ್ನ ಪ್ರಕಾರ ಮುನಿರತ್ನ ಅವರೇ ಹೇಳಿ ಮೊಟ್ಟೆ ಹೊಡೆಸಿಕೊಂಡಿರಬಹುದು. ಆಕಸ್ಮಾತ್‌ ಉದ್ದೇಶಪೂರ್ವಕವಾಗಿ ಎಸೆದಿದ್ದರೆ ತಪ್ಪು. ಅವರೊಬ್ಬ ಶಾಸಕ. ಆ ರೀತಿ ಮಾಡಬಾರದು. ಶಾಸಕರಿಗೆ ಘನತೆ, ಗೌರವವಿರುತ್ತದೆ. ಹೀಗಾಗಿ, ತನಿಖೆ ನಡೆಸಿ ಕ್ರಮ ಆಗಬೇಕು ಎಂದರು.

ಹೆಚ್ಚುವರಿ 30 ಕೋಟಿ ಅನುದಾನ: ‘ರಸ್ತೆ ಅಭಿವೃದ್ಧಿಗೆಂದು ಕೋಲಾರಕ್ಕೆ 30 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್‌ ಆಗಿದೆ. ಹಳ್ಳಿಗಳಲ್ಲೂ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಹಿಂದೆ ಪಿಎಂಜಿವೈಎಸ್‌, ಸಿಎಂಜಿವೈಎಸ್‌ ಯೋಜನೆ ಇದ್ದದ್ದು ಈಗ ಪ್ರಗತಿ ಪಥವಾಗಿದೆ. ಈ ಯೋಜನೆಯಡಿ ಪ್ರತಿ ಕ್ಷೇತ್ರದಲ್ಲಿ 40 ಕಿ.ಮೀ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪ್ರಸ್ತಾವ ಕಳುಹಿಸಿಕೊಡಲಾಗಿದೆ’ ಎಂದರು.

‘ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಸಭೆ ನಡೆದು ನೂರು ವರ್ಷಗಳಾಗಿದೆ. ಆ ನೆನಪಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಸಮಾವೇಶ ನಡೆಯುತ್ತಿದ್ದು, ಶುಕ್ರವಾರದ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಅಫ್ಸರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಕಿಲಾರಿಪೇಟೆ ಮಣಿ, ಮುಂತಾದವರು ಇದ್ದರು.

Ramesh Babu

Journalist

Recent Posts

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

35 minutes ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

41 minutes ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

2 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

3 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

8 hours ago

ಅಕ್ರಮ ಸಂಬಂಧ.. ಪ್ರಿಯತಮೆಯನ್ನ ಬ*ರ್ಬರವಾಗಿ ಕೊಂ*ದು ನೇ*ಣಿಗೆ ಶರಣಾದ ಪ್ರಿಯಕರ.!

ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದು*ರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.…

8 hours ago