ಇನ್ನು ಮುಂದೆ ಸಹಾಯ ಕೇಳಿಕೊಂಡು ನನ್ನ ಬಳಿ ಯಾರು ಬರಬೇಡಿ, ನಾನು ಯಾವುದೇ ಮದುವೆ ಬಂದರೂ ಮುಯ್ಯಿ ಕೂಡ ಹಾಕಲ್ಲ ಎಂದು ಹತಾಶೆ ಮಾತುಗಳನ್ನಾಡಿದ ನಾಗಮಂಗಲ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಸುರೇಶ್ ಗೌಡ.
ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಂಬಿದವರಿಂದಲೇ ನನಗೆ ಮೋಸ ಆಗಿದೆ, ನಾನೀಗ ಸೋತಿದ್ದೇನೆ….ಈ ಚುನಾವಣೆ ಸೋಲಿನಿಂದ ಬೇಜಾರಾಗಿ ನನ್ನ ಮನಸ್ಸು ಕಲ್ಲಾಗಿದೆ ಎಂದು ಹೇಳಿದರು.
ವೈಯಕ್ತಿಕ ಕಷ್ಟ ಹೇಳಿಕೊಂಡು ನನ್ನ ಬಳಿ ಯಾರೂ ಕೂಡ ಬರಬೇಡಿ, ನಾನೀಗ ಚುನಾವಣೆ ಸೋತು ಕಷ್ಟದಲ್ಲಿದ್ದೇನೆ, ಆದರೂ ಬಂದು ಸಹಾಯ ಕೇಳ್ತೀರಾ ಎಂದು ಸೋತ ಹತಾಶೆಗೆ ಸಾರ್ವಜನಿಕರ ಮೇಲೆ ಮಾಜಿ ಶಾಸಕನ ಆಕ್ರೋಶವ್ಯಕ್ತವಾಯಿತು.