ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ 23/2, 23/3, 23/4, 23/8 ರಲ್ಲಿ ಸುಮಾರು 20 ಎಕರೆ ಜಮೀನು ನನ್ನ ಮತ್ತು ನನ್ನ ಧರ್ಮಪತ್ನಿರವರು ಕ್ರಯಕ್ಕೆ ಪಡೆದು ಖಾತೆಯಾಗಿರುತ್ತದೆ. 20 ಎಕರೆ ಜಮೀನನ್ನು ಕಾನೂನಾತ್ಮಕವಾಗಿ  ಖರೀದಿ ಮಾಡಿದ್ದೇನೆ. ಈ ಹಿನ್ನೆಲೆ ಮಾ.29ರ ಭಾನುವಾರದಂದು ಜಮೀನಿಗೆ ಕಾಂಪೌಂಡ್ ನಿರ್ಮಿಸುವ ವೇಳೆ ದಡಘಟ್ಟಮಡಗು ಗ್ರಾಮದ ವಾಸಿಗಳಾದ ಗಂಗಾಧರ ಡಿ.ಎನ್, ಲೋಕೇಶ್ ಡಿ.ಎನ್, ಲಿಂಗರಾಜು, ರಕ್ಷಿತ್, ರವಿಚಂದ್ರ ಮತ್ತು ಕೇಶವಮೂರ್ತಿ ಸೇರಿದಂತೆ 19 ಮಂದಿ, ಜೊತೆಗೆ ಇವರ ಹತ್ತಿರ ಸಂಬಂಧಿಗಳು ಸಹ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ದುರುದ್ದೇಶದ್ದಾಗಿರುತ್ತದೆ. ನಾನು ಅವರ ಜಮೀನನ್ನು ಕಬಳಿಕೆ ಮಾಡಿಲ್ಲ. ನಾನು ಕಾಂಪೌಂಡ್ ಹಾಕುತ್ತಿರುವ ಜಮೀನಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ನಮ್ಮ ಮೇಲೆ ದೌರ್ಜನ್ಯವೆಸಗಿ ಹಲ್ಲೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ವಕೀಲ ಪ್ರತಾಪ್ ಆರೋಪಿಸಿದರು.

ಈ ಕುರಿತು ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಮೋಸ, ವಂಚನೆ, ಕಾನೂನು ಉಲ್ಲಂಘನೆ ಮಾಡಿ ಯಾವ ಭೂಮಿಯನ್ನು ಖರೀದಿ ಮಾಡಿಲ್ಲ.‌ ಅದೇರೀತಿ ನೇರವಾಗಿ ನಾನು ಯಾವತ್ತೂ, ಯಾವ ರೈತನಿಂದಲೂ ಜಮೀನು ಖರೀದಿ‌ ಮಾಡಿಲ್ಲ. ರೈತರು ಬೇರೆಯವರಿಗೆ ಮಾರಾಟ ಮಾಡಿರುವ ವ್ಯಕ್ತಿಗಳಿಂದ ಕೊಳ್ಳುತ್ತೇನೆ ಎಂದರು..

ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ರಾಜಕೀಯವಾಗಿ ಸಕ್ರಿಯನಾಗಿದ್ದೇನೆ‌. ಈ ನನ್ನ ಏಳಿಗೆ ಸಹಿಸದೇ ದುರುದ್ದೇಶದಿಂದ ನನ್ನ ಹೆಸರಿಗೆ ಕಪ್ಪುಚುಕ್ಕೆ ತರಲು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದರು…

ಅವರು ಜಮೀನು ವಿವಾದದಲ್ಲಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದರು. ಎಲ್ಲಾ ಕೇಸ್ ಡಿಸ್ ಮಿಸ್ ಆಗಿದೆ. ಯಾವುದೇ ಸ್ಟೇ ಇಲ್ಲ, ಯಾವುದೇ ಕೇಸ್ ಇಲ್ಲದೇ ಇದ್ದರೂ, ಇದು ನನ್ನ ಜಮೀನು ಎಂದು ಸುಖಾಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ..

ನಾನು ಯಾವತ್ತೂ ಸರ್ಕಾರಿ, ಬಡವರ ಜಮೀನಿಗೆ ಹೋಗಿಲ್ಲ. ನಾನು ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಬಾರದು ಎಂಬ ದುರುದ್ದೇಶದಿಂದ ಹುನ್ನಾರ ಮಾಡಿಕೊಂಡು ಗಲಾಟೆ ಮಾಡಿದ್ದಾರೆ. ನನಗೆ ಹಲ್ಲೆ ಮಾಡಿರುವುದನ್ನು ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ…ಎಂದರು.

ಅವರು ಪೊಜಿಷನಲ್ಲೇ ಇಲ್ಲ. ನೂರು ವರ್ಷದಿಂದ ಅವರ ಬಳಿ ಸೂಕ್ತ ದಾಖಲೆ ಇಲ್ಲ.‌ ನಾನು ಕಾನೂನುಬದ್ಧವಾಗಿ ಜಮೀನು ಕೊಂಡುಕೊಂಡಿದ್ದೇನೆ. ಯಾರದೋ ಜಮೀನಿಗೆ ನಾನ್ಯೇಕೆ ಹೋಗಲಿ. ಹಲ್ಲೆ ನಡೆದ ನಂತರ ರಾಜೀ ಮಾಡಿಕೊಳ್ಳಿ ಅಂತಾ ಫೋನ್ ಬಂದಿತ್ತು, ರಾಜಿಗೆ ಒಪ್ಪದಿದ್ದಾಗ ಕೌಂಟರ್ ಎಫ್ಐ ಆರ್ ಆಗಿದೆ ಎಂದರು.

ನಾನು ಕಾನೂನು ಹೋರಾಟ ನಡೆಸಿ ನನ್ನ ತಪ್ಪು ಏನೂ ಇಲ್ಲ ಎಂದು ಸಾಬೀತುಪಡಿಸುತ್ತೇನೆ. ನನ್ನ ಸಮಾಜ ಸೇವೆ ಮುಂದುವರಿಸುತ್ತೇನೆ. ನನ್ನನ್ನು ನಂಬಿ ಬಂದವರಿಗೆ ನ್ಯಾಯ ಕೊಡಿಸುತ್ತೇನೆ. ರಾಜಕೀಯವಾಗಿ ಸಕ್ರಿಯನಾಗಿರುತ್ತೇನೆ ಎಂದರು.

Ramesh Babu

Journalist

Recent Posts

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

34 minutes ago

KIADB ಭೂಸ್ವಾಧೀನ ವಿರೋಧಿಸಿ ತಾಲೂಕು ಕಚೇರಿಗೆ ಟ್ರ್ಯಾಕ್ಟರ್ ರ್ಯಾಲಿ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊಣ್ಣೇನಹಳ್ಳಿ  ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು…

9 hours ago

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

15 hours ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

1 day ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

1 day ago

ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ

ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…

1 day ago