ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬ ಸಂಭ್ರಮ: ಬೆಸ್ತರಪೇಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ರೂಪದ ಗಣೇಶ ಮೂರ್ತಿ

ಇಂದು ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ವಿಜೃಂಭಣೆ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಮನೆಗಳಲ್ಲಿ, ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ವಿವಿಧ ರೂಪ, ಭಂಗಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಎಲ್ಲೆಡೆ ಗಣಪತಿಯ ಆರಾಧನೆ ಶ್ರದ್ಧೆ, ಭಕ್ತಿಯಿಂದ ನಡೆಯುತ್ತಿದೆ.

ದೊಡ್ಡಬಳ್ಳಾಪುರ ನಗರದ ಬೆಸ್ತರಪೇಟೆಯಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಸ್ವಾಮಿ ವಿವೇಕಾನಂದ ಘಟಕದ ವತಿಯಿಂದ 12‌ಅಡಿ ಎತ್ತರದ ಹಿಂದೂ‌ ಮಹಾಗಣಪತಿ(ಇಮ್ಮಡಿ ಪುಲಿಕೇಶಿ) ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿದೆ…

ಚಾಲುಕ್ಯ ವಂಶದ ಪ್ರಸಿದ್ಧ ರಾಜ ಇಮ್ಮಡಿ ಪುಲಿಕೇಶಿ ಲುಕ್‌ನಲ್ಲಿ ಗಣೇಶ ವಿಗ್ರಹ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಪ್ರತಿ ವರ್ಷವೂ ಪುರಾತನ ಕಾಲದಿಂದಲೂ ನಾಡಿನ ಅಭಿವೃದ್ಧಿಗಾಗಿ, ಏಳಿಗೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದ ಮಹಾನ್ ಸಾಧಕರ ಕುರಿತು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಅವರನ್ನು ಹೋಲುವ (ಶೈಲಿ) ಗಣೇಶ ಮೂರ್ತಿಗಳನ್ನು ತಯಾರಿಸಿ ಗಣೇಶ ಹಬ್ಬದಂದು ಪ್ರತಿಷ್ಟಾಪಿಸಿ‌ ಪೂಜಿಸಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ವ ಬಜರಂಗದಳ ನಗರ ಕಾರ್ಯದರ್ಶಿ ಉಮೇಶ್ ತಿಳಿಸಿದರು.

ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಇತಿಹಾಸ…

ಇಮ್ಮಡಿ ಪುಲಿಕೇಶಿಯು (ಕ್ರಿ.ಶ. 610-642) ಚಾಲುಕ್ಯ ವಂಶದ ಪ್ರಸಿದ್ಧ ದೊರೆ. ಅವನು ದಖನ್ ಪ್ರಸ್ಥಭೂಮಿಯಲ್ಲಿ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿದನು ಮತ್ತು ಹರ್ಷವರ್ಧನನನ್ನು ಸೋಲಿಸಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದನು. ಅವನ ಆಡಳಿತದಲ್ಲಿ ಚಾಲುಕ್ಯ ಸಾಮ್ರಾಜ್ಯವು ಉಚ್ಛ್ರಾಯ ಸ್ಥಿತಿಯನ್ನು ತಲುಪಿತು.

ಚಿಕ್ಕಂದಿನಿಂದಲೂ ಹೋರಾಟದ ಜೀವನ ನಡೆಸಿದ ಪುಲಿಕೇಶಿ ತನ್ನ ರಾಜ್ಯವನ್ನು ವಿಸ್ತರಿಸಿದ. ಉತ್ತರ ಭಾರತವನ್ನು ವಶಪಡಿಸಿಕೊಳ್ಳು ಇಂಗಿತ ಇತ್ತು. ಆದರೆ ಹರ್ಷವರ್ಧನನೇ ಯುದ್ಧ ಸಾರಿದಾಗ ಪುಲಿಕೇಶಿ ಎದುರು ಸೋತು ಸಂಧಿ ಮಾಡಿಕೊಂಡಿದ್ದ.

Ramesh Babu

Journalist

Recent Posts

ಮರ್ಯಾದಾ ಹತ್ಯೆ……..

  ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…

3 hours ago

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

14 hours ago

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ….3 ಕೋಟಿ ಮೌಲ್ಯದ 140 ಕೆಜಿ ಬೆಳ್ಳಿ ಅಭರಣಗಳ ಕಳವು

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…

18 hours ago

ಕಾಲೇಜಿನಿಂದ ಸಹೋದರನನ್ನು ಮನೆಗೆ ಕರೆದುಕೊಂಡು ಬರುವಾಗ ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ನಲ್ಲಿದ್ದ ಅಣ್ಣ ಸಾವು, ತಮ್ಮನಿಗೆ ಗಾಯ

ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…

20 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ರೌಂಡ್ಸ್​

ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…

22 hours ago

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

2 days ago