ಇಂದು ನಾಡಿನೆಲ್ಲಡೆ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೋಮವಾರ ನಗರದ ಹಲವು ಶ್ರೀಕೃಷ್ಣ, ವಿಷ್ಣು ಮಂದಿರ ಹಾಗೂ ಮಠಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಕೃಷ್ಣ ಸೇರಿದಂತೆ ವಿವಿಧ ವೇಷಭೂಷಣ ಮಕ್ಕಳಿಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿವಿಧ ರೀತಿಯ ಪೂಜೆ ಪುನಸ್ಕಾರ ಸೇರಿದಂತೆ 108 ಬಗೆಯ ಖಾದ್ಯಗಳ ನೈವೇದ್ಯ ಏರ್ಪಡಿಸಲಾಗಿದೆ.
ಅದೇ ರೀತಿ ಕೋನಘಟ್ಟದ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಸ್ಕಾನ್ ಶ್ರೀ ನರಸಿಂಹ ಗಿರಿಧಾರಿ ಮಂದಿರದ ವತಿಯಿಂದ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಈ ವೇಳೆ ಶ್ರೀ ರಾಧಾಕೃಷ್ಣರ ವೇಷಭೂಷಣ ಸ್ಪರ್ಧೆಯಲ್ಲಿ ಪುಟಾಣಿಗಳು ಭಾಗವಹಿಸಿ ಎಲ್ಲರ ಕಣ್ಮನ ಸೆಳೆದರು.