ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಮುಂಜಾನೆಯಿಂದಲೇ ಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲು ಜನ ಮುಂದಾಗುತ್ತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದಂದು, ಮುತ್ತೈದೆಯರಿಗೆ ಅರಿಶಿನ-ಕುಂಕುಮ ನೀಡುವುದರ ಜೊತೆಗೆ, ಹಸಿರು ಬಳೆಗಳನ್ನು ನೀಡುವುದು ವಾಡಿಕೆಯಾಗಿದೆ. ಹಸಿರು ಬಣ್ಣವು ಸಮೃದ್ಧಿ, ಸಂತೋಷ ಮತ್ತು ಹೊಸ ಆರಂಭಗಳ ಸಂಕೇತವಾಗಿದೆ. ಈ ಹಬ್ಬದಲ್ಲಿ, ಮುತ್ತೈದೆಯರು ಅರಿಶಿನ-ಕುಂಕುಮ ಮತ್ತು ಬಳೆಗಳನ್ನು ಸ್ವೀಕರಿಸುವ ಮೂಲಕ, ಲಕ್ಷ್ಮೀ ದೇವಿಯ ಆಶೀರ್ವಾದ ಮತ್ತು ಸೌಭಾಗ್ಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ವರಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ ಹೀಗಿದೆ….
ಸಿಂಹ ಲಗ್ನ ಪೂಜೆ ಮುಹೂರ್ತ: ಮುಂಜಾನೆ 06:29 ರಿಂದ ಬೆಳಗ್ಗೆ 08:46ರವರೆಗೆ. ಮುಂಜಾನೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 17 ನಿಮಿಷಗಳು. ಮಧ್ಯಾಹ್ನ ಪೂಜೆಗೆ ಶುಭ ಮುಹೂರ್ತ: ಮಧ್ಯಾಹ್ನ 1:22 ರಿಂದ 3:41. ಮಧ್ಯಾಹ್ನ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 19 ನಿಮಿಷ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಸಂಜೆ 7:27 ರಿಂದ ರಾತ್ರಿ 8:54 ರವರೆಗೆ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 1 ಗಂಟೆ 27 ನಿಮಿಷ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಆಗಸ್ಟ್ 8ರಂದು ರಾತ್ರಿ 11:55 ರಿಂದ ಆಗಸ್ಟ್ 9ರಂದು ಮುಂಜಾನೆ 01:50 ರವರೆಗೆ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಅವಧಿ: ಗಂಟೆ 56 ನಿಮಿಷ.