ಪ್ರಬಲ ವಾನರ ದೇವ ಮತ್ತು ಭಗವಾನ್ ರಾಮನ ಕಟ್ಟಾ ಭಕ್ತನಾದ ಭಗವಾನ್ ಆಂಜನೇಯ ಸ್ವಾಮಿಯ ಜನ್ಮ ದಿನವನ್ನು ಹನುಮ ಜಯಂತಿಯನ್ನಾಗಿ ಇಂದು ನಾಡಿನಾದ್ಯಂತ ಹಬ್ಬದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ…
ಹನುಮ ಜಯಂತಿ ಪ್ರಯುಕ್ತ ತಾಲೂಕಿನ ವಿವಿಧ ಆಂಜನೇಯಸ್ವಾಮಿ ದೇವಸ್ಥಾನಗಳು ತಳಿರು-ತೋರಣ, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡಿದ್ದು, ಇಂದು ಮುಂಜಾನೆಯಿಂದಲೇ ದೇವರಿಗೆ ವಿವಿಧ, ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿವೆ.
ಅದೇರೀತಿ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಶ್ರೀ ರಾಮತಾರಕ ಹೋಮ, ಆಂಜನೇಯ ಸ್ವಾಮಿ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ, ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತಿದೆ.
ಇಂದು ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಆಗಮನಿಸಿ ಆಂಜನೇಯಸ್ವಾಮಿ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ…