
ನಾಗರಕೆರೆ ವಾಕಿಂಗ್ ಪಾಥ್ ಬಳಿ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿದೆ.
ನಾಗರಕೆರೆ ವಾಕಿಂಗ್ ಪಾಥ್ ನಲ್ಲಿ ಚೈನ್ ಲಿಂಕ್ ಬೇಲಿ ಆಳವಡಿಸಲಾಗಿದೆ. ಈ ಬಲೆ ಕಾಂಪೌಡ್ ಗೆ ಬಳ್ಳಿಗಳು, ಗಿಡಗಂಟಿಗಳು ಸುತ್ತಿಕೊಂಡಿದ್ದು, ಇದರಿಂದ ಹುಳ ಹುಪ್ಪಟೆಗಳ ಹಾವಳಿ ಹೆಚ್ಚಾಗಿದೆ… ಬಲೆ ಕಾಂಪೌಡ್ ಗೆ ಹಬ್ಬಿಕೊಂಡಿರುವ ಬಳ್ಳಿಗಳಲ್ಲಿ ಬೃಹತ್ ನಾಗರಹಾವು ಕಾಣಿಸಿಕೊಂಡಿದೆ..
ವಾಕಿಂಗ್ ಪಾಥ್ ಅಲ್ಲಿ ವಾಕಿಂಗ್ ಮಾಡುವವರು ನಿಗಾ ವಹಿಸಿ, ಎಚ್ಚರವಹಿಸಿ ವಾಕಿಂಗ್ ಮಾಡಬೇಕಾಗಿದೆ.
ಚೈನ್ ಲಿಂಕ್ ಬೇಲಿಗೆ ಹಬ್ಬಿಕೊಂಡಿರುವ ಬಳ್ಳಿಗಳು, ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ….