ನಾಗರಕೆರೆಯ ಜಲ ಕಳೆ ಹಾಗೂ ಕಸವನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ, ಕೆರೆಯ ಸ್ವಚ್ಛತೆಯನ್ನು ಕಾಪಾಡಲು ಮನವಿ

ದೊಡ್ಡಬಳ್ಳಾಪುರದ ಐತಿಹಾಸಿಕ ನಾಗರಕೆರೆಯು ನೂರಾರು ದಶಕಗಳ ಕಾಲ ಸಾವಿರಾರು ಜನರಿಗೆ ಕುಡಿಯುವ ನೀರನ್ನು ಒದಗಿಸಿತ್ತು. ಆದರೆ, ಕೆಲ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಯೋಜನೆಯಿಂದ ಸಾವಿರಾರು ಜನರ ಮಲ-ಮೂತ್ರ ಸೇರುವ ಕೊಳಚೆ ನೀರಿನ ಕೆರೆಯಾಗಿ ಮಾರ್ಪಟ್ಟಿದೆ. ಇದಲ್ಲದೆ ಕೆರೆಗೆ ನಿರಂತರವಾಗಿ ಘನ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಬಯೋ ಮೆಡಿಕಲ್ ತ್ಯಾಜ್ಯ, ಕೋಳಿ ತ್ಯಾಜ್ಯ, ಕಟ್ಟಡ ತ್ಯಾಜ್ಯ ಹೀಗೆ ಹಲವು ಬಗೆ-ಬಗೆಯ ತ್ಯಾಜ್ಯ ಸೇರಿ ಕಸದ ತೊಟ್ಟಿಯಂತಾಗಿದೆ.

ಜೊತೆಗೆ ಕೆರೆಯಲ್ಲಿ ಜಲ-ಕಳೆಯು ದಿನೇ ದಿನೇ ಹೆಚ್ಚುತಿದ್ದು, ಈಗಾಗಲೇ ಬಹುತೇಕ ಕೆರೆಯು ಜಲ-ಕಳೆಯಿಂದ ಕೂಡಿದೆ. ಕಳೆದ ಕೆಲವು ತಿಂಗಳ ಹಿಂದೆ ಕೆರೆಯಲ್ಲಿ ಮೀನುಗಳ ಮಾರಣ ಹೋಮವಾದಾಗ ತಾವುಗಳು ಭೇಟಿ ನೀಡಿ, ತಮ್ಮ ಸ್ವಂತ ಖರ್ಚಿನಲ್ಲಿ ಜಲ-ಕಳೆಯನ್ನು ಹೊರ ತೆಗೆದು ಕೆರೆಯನ್ನು ಸಂರಕ್ಷಿಸಿವುದಾಗಿ ಸಾರ್ವಜನಿಕವಾಗಿ ಮಾತು ನೀಡಿರುತ್ತೀರಿ, ಆದರೆ ಈವರೆಗೂ ಯಾವುದೇ ಕಾರ್ಯ ಆರಂಭವಾಗದೇ ಇರುವುದು ತಮ್ಮ ಕಾರ್ಯ ವೈಖರಿಯ ಬಗ್ಗೆ ಅನೇಕ ಅನುಮಾನಗಳು ಮೂಡುವಂತೆ ಮಾಡಿದೆ.

ಆದ್ದರಿಂದ, ಅತ್ಯಂತ ತ್ವರಿತವಾಗಿ ಕೆರೆಯಲ್ಲಿರುವ ಜಲಕಳೆಯನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ, ಕೆರೆಯಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಿ, ಕೆರೆಗೆ ಕಸವಾಕುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಭವಿಷ್ಯದಲ್ಲಿ ಕೆರೆಯ ಸತ್ತಲೂ ನಿಯಮಿತವಾಗಿ ಕಸವನ್ನು ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಎಂದು ಶಾಸಕ ಧೀರಜ್ ಮುನಿರಾಜ್ ಅವರಿಗೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *