ನಾಗಮಂಗಲ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕೋಲಾರ: ಮಂಡ್ಯ ಜಿಲ್ಲೆಯ ನಾಗಮಂಗಲ ನಗರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಮತ್ತು ದೇಶದ್ರೋಹಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಅಖಂಡ ಭಾರತ ವಿನಾಯಕ ಮಹಾಸಭಾ ಹಾಗೂ ಹಿಂದೂಪರ ಸಂಘಟನೆಗಳು ನಗರದ ಪ್ರವಾಸಿ ಮಂದಿರ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ಮುಸ್ಲಿಮ್ ಸಮುದಾಯವು ಕೋಮುಗಲಭೆಗಳನ್ನು ನಡೆಸಿದ್ದಾರೆ ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿ ಸರ್ಕಾರ ರಚನೆಯಾಗಬೇಕು ಭಯೋತ್ಪಾದಕರಿಂದ ವಿಘ್ನ ವಿನಾಯಕನ ಮೂರ್ತಿಯ ಮೇಲಿನ ಹಲ್ಲೆಯು ಮುಂದೆ ನಡೆಯದ ರೀತಿಯಲ್ಲಿ ಪುಂಡರಿಗೆ ಪಾಠ ಕಲಿಸಬೇಕು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಮತಾಂಧರ ಶಕ್ತಿಗಳ ಅಟ್ಟಹಾಸವು ಮಿತಿ ಮೀರಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಿಡಿಕಾರಿದರು.

ಕೋಲಾರದಲ್ಲಿ ಕೂಡ ನಾಗಮಂಗಲ ಅಂತಹ ಘಟನೆಗಳು ನಡೆಯುತ್ತವೆ ಹಿಂದೂಗಳಾದ ನಾವು ಇದನ್ನು ಪ್ರಶ್ನೆ ಮಾಡಬೇಕು ಮತ್ತು ಖಂಡಿಸಬೇಕಾಗಿದೆ ಅವರ ಮೇಲೆ ಕೂಡಲೇ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಬೇಕು ರಾಷ್ಟ್ರ ದ್ರೋಹಿ ಕೃತ್ಯ ನಡೆಸಿದವರ ವಿರುದ್ದ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಗಲಭೆಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ್ ಮಾತನಾಡಿ, ಕಲ್ಲು ತೂರಿದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷಿಸಬೇಕು ಕಲ್ಲು ತೂರಾಟವನ್ನು ಪ್ರಚೋದಿಸಿದ ಪಟ್ಟಭದ್ರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ. ಪ್ರವೀಣ್ ಗೌಡ, ನಾಮಲ್ ಮಂಜು, ಭಜರಂಗದಳ ಬಾಬು, ಸುರೇಶ್ ರಾಜ್, ಬಾಲಾಜಿ, ಗಾಂಧಿನಗರ ಮಹೇಶ್, ಎಬಿವಿಪಿ ಹರೀಶ್, ಸಂಪತ್, ಶಶಿ, ಮುರಳಿ, ವಿನಯ್, ರವಿಕುಮಾರ್, ಶ್ರೀನಿವಾಸ್, ಸಾಯಿಮೌಳಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!