ನಳಂದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪಾಠಕ್ಕೂ ಸೈ , ಆಟಕ್ಕೂ ಸೈ

ಬೆಂಗಳೂರು ಗ್ರಾಮಾಂತರ ಜಲ್ಲೆಯ ನಳಂದ ವಿದ್ಯಾಸಂಸ್ಥೆ ಕ್ರೀಡಾ ವಿಭಾಗದಲ್ಲಿ ಉತ್ತಮ ಸ್ಥಾನಮಾನ ಪಡೆದಿದೆ. ಪಾಠಕ್ಕೂ ಸೈ, ಆಟಕ್ಕೂ ಸೈ ಎನ್ನುವಂತೆ ಇಲ್ಲಿನ ಮಕ್ಕಳನ್ನು ತಯಾರು ಮಾಡುವಲ್ಲಿ ಯಶಸ್ಸು ಕಾಣುತ್ತಿದೆ. ಹೋಬಳಿ ಮಟ್ಟದ ಕ್ರೀಡಾ ಕೂಟದಿಂದ ಹಿಡಿದು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶಸ್ತಿ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದಕ್ಕೆ ಶಾಲೆಯ ಅಧ್ಯಕ್ಷ ಲೋಕೇಶ್ ಅವರ ಕ್ರೀಡಾ ಮನೋಭಾವವೇ ಕಾರಣ. ಈ ಹಿನ್ನೆಲೆ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಕ್ರೀಡೆಯಲ್ಲಿ ಒಳ್ಳೆ ಫಲಿತಾಂಶ ತಂದು ಕೊಡುತ್ತಿದ್ದಾರೆ…

ನಳಂದ ವಿದ್ಯಾಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶಿಷ್ಟವಾದ ವಿದ್ಯಾಸಂಸ್ಥೆಯಾಗಿದೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಹೆಚ್ಚು ಒತ್ತು ನೀಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಠಿ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಹರೀಶ್ ಹೇಳಿದರು.

ಕ್ರೀಡಾ ವಿಭಾಗದಲ್ಲಿ ನಮ್ಮ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸುಮಾರು 24 ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದು ಬಂದಿದ್ದಾರೆ. ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಸುಮಾರು 21 ಮಂದಿ ಮಕ್ಕಳು ಆಯ್ಕೆಯಾಗಿದ್ದಾರೆ. ಹೀಗೆ ನಮ್ಮ ಶಾಲೆಯ ಮಕ್ಕಳು ಕ್ರೀಡೆಯಲ್ಲಿ‌ ಮಹತ್ತರವಾದ ಸಾಧನೆ ಮಡಿ ಶಾಲೆ ಹಾಗೂ ಪೋಷಕರಿಗೆ ಒಳ್ಳೆ ಹೆಸರನ್ನು ತರುತ್ತಿದ್ದಾರೆ. ಅದರ ಜೊತೆಗೆ ಶೈಕ್ಷಣಿಕವಾಗಿಯೂ ಸಹ ಒಳ್ಳೆ ಅಂಕನೂ ಪಡೆದ ಜ್ಞಾನಾರ್ಜನೆ ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದರು.

ನಂತರ ಅಥ್ಲೇಟ್ ಗೌತಮ್ ಪೋಷಕ ಕಲ್ಲುಕೋಟೆ ನಾಗರಾಜ್ ಮಾತನಾಡಿ, ನಳಂದ ಸಮೂಹ ಸಂಸ್ಥೆಯಲ್ಲಿ ನನ್ನ ಮಗ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು  ನಮಗೆ ಬಹಳ ಸಂತೋಷವಾಗಿದೆ. ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು, ದೈಹಿಕ ಶಿಕ್ಷಕರ ಪ್ರೋತ್ಸಾಹದಿಂದ ಮಕ್ಕಳು ಪಾಠದ ಜೊತೆಗೆ ಆಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.

ಮಕ್ಕಳ ಬೌದ್ಧಿಕ, ದೈಹಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಾಲೆ ತುಂಬಾ ಶ್ರಮಪಡುತ್ತಿದೆ. ಅದೇರೀತಿ ಮಕ್ಕಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ನನ್ನ ಮಗ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾನೆ ಎಂಬ ನಂಬಿಕೆ ನನಗಿದೆ ಎಂದರು.

ನಂತರ ಅಥ್ಲೇಟ್ ಕೆ.ಎನ್ ಗೌತಮ್ ಮಾತನಾಡಿ, ನಾನು ಈ ಶಾಲೆಗೆ ಆರನೇ ತರಗತಿಗೆ ಬಂದು ಸೇರಿದೆ. ಆಗ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ 600 ಮೀ. ಓಟದ‌ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದೆ. 7ನೇ ತರಗತಿಯಲ್ಲಿ ಜಿಲ್ಲಾ‌ ಮಟ್ಟದ ಕ್ರೀಡಾಕೂಟದಲ್ಲಿ 600 ಮೀ. ಓಟದ ಸ್ಪರ್ಧೆಯಲ್ಲಿ ಬಹುಮಾನ ಗೆದ್ದೆ, 8ನೇ ತರಗತಿಯಲ್ಲಿ 3ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆಯಲು ಸಕಲ ಸಿದ್ಧತೆ ನಡೆಸುತ್ತಿದ್ದೇನೆ. ನನಗೆ ಪಾಠದ ಜೊತೆಗೆ ಆಟನೂ ಇಷ್ಟ, ಇದಕ್ಕೆ ನನ್ನ ಪೋಷಕರು, ಶಾಲಾ ಆಡಳಿತ ಮಂಡಳಿ, ದೈಹಿಕ ಶಿಕ್ಷಕರು ಪ್ರೊತ್ಸಾಹ ನೀಡುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪ್ರತಿದಿನ ದೈಹಿಕ ಕಸರತ್ತು, ಓಟ ಹೀಗೆ ನನ್ನ ದಿನಚರಿ ಪ್ರಾರಂಭವಾಗಿ ಓದು ಸಮಯದಲ್ಲಿ ಓದುತ್ತಾ, ಆಟವಾಡುವ ಸಮಯದಲ್ಲಿ ಆಟವಾಡುತ್ತಾ ಇರುತ್ತೇನೆ ಎಂದರು.

ಕರ್ನಾಟಕ ಕ್ರೀಡಾಕೂಟ 2025ರಲ್ಲಿ ಬಾಲಕಿಯರ ವಿಭಾಗದ ಟ್ರಿಪಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನ

ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2023-24ರಲ್ಲಿ ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ

ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ 2024-25 ಉದ್ದಜಿಗಿತದಲ್ಲಿ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ

ಎಸ್ ಜಿ ಎಫ್ ಐ 68th ರಾಷ್ಟ್ರಮಟ್ಟದ ಕ್ರೀಡಾಕೂಟ. 2024-25 ತ್ರಿವಿಧ ಜಿಗಿತದಲ್ಲಿ ತೃತೀಯಾ ಸ್ಥಾನ

ಕರ್ನಾಟಕ ರಾಜ್ಯ ಮಟ್ಟದ u-18 ಕ್ರೀಡಾಕೂಟ 2024 ಉದ್ದಜಿಗಿತದಲ್ಲಿ ಪ್ರಥಮ ಸ್ಥಾನವನ್ನು ನಳಂದ ಶಾಲಾ ಮಕ್ಕಳು ಪಡೆದಿರುತ್ತಾರೆ.

ನಳಂದ  PU ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಭುವನಾ.ಎಂ ಅವರು 2022 -23 ರಲ್ಲಿ ಕೊಲ್ಕತ್ತದಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 2025 – 2026 ಸಾಲಿನ ಇದೆ ತಿಂಗಳ 25th 26th ಮತ್ತು 27th ಜಾರ್ಕಂಡ್ ರಾಜ್ಯದ ರಾಂಚಿಯಲ್ಲಿ ನಡೆಯಿಲಿರುವ ಅಥ್ಲೆಟಿಕ್  ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ನಳಂದ ಸಮೂಹ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ನಾಜೀರ್ ಅವರು ವಿವಿಧ ಕ್ರೀಡೆಗಳಲ್ಲಿ ನಿಪುಣತೆ ಹೊಂದಿದ್ದು, ವಿದ್ಯಾರ್ಥಿಗಳ ಈ ಸಾಧನೆ ಹಿಂದೆ ಈ ದೈಹಿಕ ಶಿಕ್ಷಕ ನಾಜೀರ್ ಅವರು ಇದ್ದಾರೆ. ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಂತೆ ಸದಾ ಕಾಲ ಪ್ರೋತ್ಸಾಹಿಸುತ್ತಾರೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತಯಾರಾಗಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ…

Leave a Reply

Your email address will not be published. Required fields are marked *

error: Content is protected !!