ನರಸಾಪುರದಲ್ಲಿ 93ನೇ ವರ್ಷದ ಅದ್ಧೂರಿ ಹೂವಿನ ಕರಗ ಮಹೋತ್ಸವ

ಕೋಲಾರ : ತಾಲೂಕಿನ ನರಸಾಪುರ ಗ್ರಾಮದ ಶ್ರೀ ಧರ್ಮರಾಯ ಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ಶ್ರೀ ಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ಕರಗ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ 93ನೇ ವರ್ಷದ ಹೂವಿನ ಕರಗಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿ ಸಾವಿರಾರು ಜನರ ಸಮೂಹದಲ್ಲಿ ಅದ್ಧೂರಿಯಾಗಿ ನಡೆಯಿತು.

ಕರಗ ಹೊತ್ತು ಪೂಜಾರಿ ಕುಪ್ಪಂ ಬಾಲಾಜಿ ದೇವಾಲಯದಿಂದ ಹೊರಟು ನೃತ್ಯಕ್ಕಾಗಿ ಏರ್ಪಡಿಸಿದ್ದ ವೇದಿಕೆಯ ಮೇಲೆ ಕರಗದ ಪೂಜಾರಿ ಕುಪ್ಪಂ ಬಾಲಾಜಿ ರವರು ವಾದ್ಯ ಹಾಗೂ ತಮಟೆ ಮೇಳಗಳಿಂದ ವಿವಿಧ ರೀತಿಯ ನೃತ್ಯಗಳನ್ನು ಸಾವಿರಾರು ಜನರ ಕಣ್ಣಿಗೆ ಆಕರ್ಷಕವಾಗಿ ಕಂಗೊಳಿಸುವಂತೆ ಪ್ರದರ್ಶಿಸಿದರು. ಹೂವಿನ ಕರಗಕ್ಕೆ ನರಸಾಪುರ ಗ್ರಾಮದ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು ಹಾಗೂ ಮನೆ ಮನೆಗಳಲ್ಲಿ ಮತ್ತು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿತ್ತು.

ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ಧರ್ಮರಾಯ ಸ್ವಾಮಿ ದ್ರೌಪದಮ್ಮ ದೇವಾಲಯದಲ್ಲಿ ದೇವರುಗಳಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಮತ್ತೆ ಊರಿನಲ್ಲಿ ದೀಪಾಲಂಕಾರ ಹಾಗೂ ದೇವರುಗಳ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿದಂತೆ ವಿವಿಧ ದೈವಿಕ ಕೈಂಕರ್ಯಗಳು ನಡೆದವು. ಅದೇ ರೀತಿ ಸೋಮವಾರ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಅದ್ಧೂರಿ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಎಲ್ ಜಿ ಪೌಂಡೇಶನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಲಕ್ಷ್ಮಣ್ ಗೌಡ ಮಾಲೂರು ಸಮಾಜ ಸೇವಕ ಹೂಡಿ ವಿಜಯ ಕುಮಾರ್, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನರಸಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *