ಮಧುರೆ ಹೋಬಳಿ ನರಸಯ್ಯನ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗಂಗಮ್ಮ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಚಿಕ್ಕ ನರಸಿಂಹಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾಗಿ ಕಲಾವತಿ, ಕೃಷ್ಣಪ್ಪ, ಸೋಮಶೇಖರ್, ಪ್ರಸನ್ನಕುಮಾರ್, ಕೃಷ್ಣಪ್ಪ, ಮುನಿರಾಜು ನಟರಾಜು, ತಿಮ್ಮರಾಜು, ಮುನಿರಾಜು ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದಂತಹ ಅಧ್ಯಕ್ಷ,ಉಪಾಧ್ಯಕ್ಷ, ನಿರ್ದೇಶಕರಗಳನ್ನು ತಾಲೂಕು ಬಿಜೆಪಿ ಅಧ್ಯಕ್ಷರಾದ ನಾಗೇಶ್ ಗೌಡ, ಕಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು ಎನ್ ಆರ್ ಸೇರಿದಂತೆ ಇತರೆ ಗಣ್ಯರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಂಪಿಸಿಎಸ್ ಸೆಕ್ರೆಟರಿ ಪ್ರಸನ್ನ ಕುಮಾರ್ ಸಚಿನ್ ಗೌಡ ಸೇರಿದಂತೆ ಇತರರು ಹಾಜರಿದ್ದರು.