ನಮ್ಮ ಪೂರ್ವಜರ ಸ್ಮಶಾನ ನಮಗೆ ಬೇಕು:‌ ಇಲ್ಲದಿದ್ದರೆ ತಾಲೂಕು‌ ಕಚೇರಿ ಎದುರು ಶವ ಇಟ್ಟು ಧರಣಿ‌ ಮಾಡುವ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ದಲಿತರಿಗಾಗಿಯೇ ಅನಾಧಿಕಾಲದಿಂದಲೂ ಇದ್ದ ಸ್ಮಶಾನವನ್ನು ಪ್ರಬಲ ಸಮುದಾಯದವರು ಇದು ನಮ್ಮ ಜಮೀನು ಎಂದು ಬೇಲಿ ಹಾಕಿ ದಲಿತರಿಗೆ ಸ್ಮಶಾನ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸ್ಮಶಾನವಿಲ್ಲದ ಕಾರಣ ಹೆಣವನ್ನ ತಾಲೂಕು ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ.

ವಿಚಾರ ತಿಳಿದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್ ಪಿ ರವಿ, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ಸಮಾಜ‌ ಕಲ್ಯಾಣ ಇಲಾಖಾಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ ಆ್ಯಂಬುಲೇನ್ಸ್ ನ್ನು ಮನೆ ಮುಂದೆಯೆ ಅಡ್ಡಿ ಹಾಕಿ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ.

ನಮ್ಮ ಪೂರ್ವಜರ ಕಾಲದಿಂದಲೂ ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗ ಖಾಸಗಿಯದ್ದು ಎಂದು ಮೂರು ತಿಂಗಳಿಂದೆ ಧ್ವಂಸ ಮಾಡಿ ನಮಗೆ ಸ್ಮಶಾನ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಅಂತ್ಯಕ್ರಿಯೆಗೆ ಜಾಗಕೊಡಿ ಇಲ್ಲ ಅಂದರೆ ತಾಲೂಕು ಕಚೇರಿ ಮುಂದೆ ಅಂತ್ಯ ಸಂಸ್ಕಾರ ಮಾಡ್ತೀವಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *